Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ
ಕರ್ನಾಟಕಪ್ರಮುಖ

ಲೋಕಾ ಬಲೆಗೆ ಶಿರಹಟ್ಟಿ ಶಾಸಕ: ಚಂದ್ರು‌‌ ಲಮಾಣಿ ಸೇರಿ ಇಬ್ಬರು ಪಿಎಗಳ ಬಂಧನ

Share
2 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಗದಗ: ಗುತ್ತಿಗೆದಾರನಿಂದ 5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗೆ ಸಂಬಂಧಿಸಿದಂತೆ ಡಾ.ಚಂದ್ರು ಲಮಾಣಿ ಗುತ್ತಿಗೆದಾರನ ಬಳಿ
11ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ತಾಲೂಕಿನ ಚಿಂಚಲಿ ಗ್ರಾಮದ ಕ್ಲಾಸ್–೧ಗುತ್ತಿಗೆದಾರ ವಿಜಯ್ ಪೂಜಾರ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು.

ಶನಿವಾರ ಮಧ್ಯಾಹ್ನ 2;15 ರ ಸುಮಾರಿಗೆ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮತ್ತು ಅವರ ಇಬ್ಬರು ಆಪ್ತ ಸಹಾಯಕ ಮಂಜುನಾಥ ವಾಲ್ಮೀಕಿ ಮತ್ತು ಗುರು ನಾಯಕ್ 5 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಪೊಲೀಸರಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ. ಲೋಕಾಯುಕ್ತ ಎಸ್‌ಪಿ ಸಿದ್ಧಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಗದಗ ಲೋಕಾಯುಕ್ತ ಡಿವೈಎಸ್‌ಪಿ ವಿಜಯ್ ಬಿರಾದಾರ, ಇನ್‌ಸ್ಪೆಕ್ಟರ್ ಪರಮೇಶ್ ಕವಟಗಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ವೇಳೆ ಆಸ್ಪತ್ರೆ ಕಟ್ಟಡದಲ್ಲಿದ್ದ ಜೇನುಗೂಡಿನಿಂದ ಆಕಸ್ಮಿಕವಾಗಿ ಜೇನುಹುಳುಗಳು ಎದ್ದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡ ಆಗಿದ್ದು ಬಾಲಾಜಿ ಆಸ್ಪತ್ರೆ ಚಂದ್ರು ಲಮಾಣಿ ಅವರ ಒಡೆತನ ಆಸ್ಪತ್ರೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸದ್ಯ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ರಸ್ತೆಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸುವ ಸಣ್ಣ ನೀರಾವರಿ ಇಲಾಖೆಯ ಕೆಲಸವನ್ನು ನಿರ್ವಹಿಸಲು ಗದಗದ ಚಿಂಚೋಳಿಯ ಕ್ಲಾಸ್-1 ಗುತ್ತಿಗೆದಾರ ವಿಜಯ್ ಪೂಜಾರ್ ಅವರಿಂದ ಚಂದ್ರು ಲಮಾಣಿ 11 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ ಈ ಬಗ್ಗೆ ದೂರುದಾರರು ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದರು. ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿ ಆರೋಪಿಗಳನ್ನು 5 ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಿದರು.

ತೆಳ್ಳಗೆ, ಹತ್ತಿಯಂತೆ ಈ ರೀತಿ ರೊಟ್ಟಿ ಮಾಡಿ…ಎಲ್ಲರೂ ಇಷ್ಟ ಪಡ್ತಾರೆ

TAGGED:Shirahatti MLA Dr. Chandru Lamani falls into the trap of Loka
Share This Article
Facebook Twitter Copy Link Print
Previous Article ತೆಳ್ಳಗೆ, ಹತ್ತಿಯಂತೆ ಈ ರೀತಿ ರೊಟ್ಟಿ ಮಾಡಿ…ಎಲ್ಲರೂ ಇಷ್ಟ ಪಡ್ತಾರೆ
Next Article ಸಿಎಸ್ ಶಾಲಿನಿ ರಜನೀಶ್‌ಗೆ ಕ್ಷಮೆ ಕೇಳಿದ ಸ್ನೇಹಮಯಿ ಕೃಷ್ಣ ;ದಾರಿ ತಪ್ಪಿಸಿದ ವಿನೋದ್ ಹೆಸರು ರಿವೀಲ್!

Popular Posts

ಸನ್ನಿ ಡಿಯೋಲ್ ನಟನೆಯ ಲಾಹೋರ್ 1947 ಚಿತ್ರದ ಟೈಟಲ್ ಬದಲಾವಣೆ

1 Min Read

ನೇಪಾಳದಿಂದಲೂ ಭಾರತದ ಮಾವಿನಹಣ್ಣಿಗೆ ನಿರ್ಬಂಧ

1 Min Read

Janhvi Kapoor ಪೆದ್ದಿ ಸಕ್ಸಸ್ ಮೀಟ್‌ಗೆ ಜಾನ್ವಿ ಕಪೂರ್ ಗೈರು : ಕಾರಣವೇನು?

1 Min Read

ಟ್ರೆಕಿಂಗ್ ಹೋಗಿದ್ದ ಯುವತಿ ನಾಪತ್ತೆ :ಶೋಧಕ್ಕೆ 120 ಜನರು, ಡ್ರೋನ್​ಗಳು

1 Min Read

You Might Also Like

ಕರ್ನಾಟಕಪ್ರಮುಖ

ಪತಿಯೊಂದಿಗೆ ಜಗಳವಾಡಿ ತವರಿಗೆ ಹೊರಟಿದ್ದ ಮಹಿಳೆ ಮೇಲೆ ಗ್ಯಾಂಗ್ ರೇಪ್

1 Min Read
ದೇಶಪ್ರಮುಖಮನರಂಜನೆ

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಹತ್ತಾರು ಪ್ರಯೋಜನ; ಟಾಪ್​ ಸೀಕ್ರೆಟ್​ ರಿವೀಲ್ ಮಾಡಿದ ಕಂಗನಾ!

2 Min Read
ಲೈಫ್‌ಸ್ಟೈಲ್ಆರೋಗ್ಯಪ್ರಮುಖ

ಒಣ ತುಳಸಿ ಗಿಡವಿದ್ದರೆ ತಪ್ಪಿಯೂ ಎಸೆಯಬೇಡಿ.! ಈ ಕೆಲಸ ಮಾಡಿ ಸಾಕು ಎಲ್ಲವೂ ಒಳ್ಳೆಯದೇ ಆಗುತ್ತೆ.!

3 Min Read
ದೇಶಪ್ರಮುಖ

India arms policy ಭಾರತದ ಶಸ್ತ್ರಾಸ್ತ್ರ ನೀತಿಯಲ್ಲಿ ಮಹತ್ವದ ಬದಲಾವಣೆ: ಇದೇ ಮೊದಲ ಬಾರಿ 12 ಸಿಡಿತಲೆ ಪರಮಾಣು ನಿಯೋಜನೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?