Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದೂ ದೇವತೆಗಳ ಅಪಹಾಸ್ಯ ಮಾಡಿದ ಆರೋಪ : ತೀರ್ಪುಗಾರರಿಗೆ ಪೊಲೀಸ್ ನೋಟಿಸ್
ಕರ್ನಾಟಕಪ್ರಮುಖಮನರಂಜನೆ

ಕಾಮಿಡಿ ಕಿಲಾಡಿಗಳು ಶೋನಲ್ಲಿ ಹಿಂದೂ ದೇವತೆಗಳ ಅಪಹಾಸ್ಯ ಮಾಡಿದ ಆರೋಪ : ತೀರ್ಪುಗಾರರಿಗೆ ಪೊಲೀಸ್ ನೋಟಿಸ್

Share
1 Min Read
SHARE

https://youtube.com/shorts/meQfr5hOsT4?si=–SvccKUHgJJVjWK

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕಾಮಿಡಿ ಕಿಲಾಡಿಗಳು’ ಶೋ ಸಂಚಿಕೆಯೊಂದರಲ್ಲಿ ಮಹಾಭಾರತದ ಪಾತ್ರಗಳು ಮತ್ತು ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದ ಆರೋಪ ಕೇಳಿ ಬಂದಿದೆ. ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ತೀರ್ಪುಗಾರರನ್ನು ಕೂಡ ತನಿಖೆಗೆ ಒಳಪಡಿಸಲು ಪೊಲೀಸರು ಬಯಸುತ್ತಿದ್ದಾರೆ ಎಂದು ಜೀ ಎಂಟರ್ಪ್ರೈಸಸ್ ಹೈಕೋರ್ಟ್ ಗೆ ದೂರು ನೀಡಿದೆ.

ಪ್ರಕರಣ ಸಂಬಂಧ ಜೀ ಪ್ರತಿನಿಧಿ ದೀಪಕ್ ಶ್ರೀರಾಮುಲು ಮತ್ತು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ನಿರ್ದೇಶಕ ಕೆ. ಅನಿಲ್ ಕುಮಾರ್ ಸಲ್ಲಿಸಿದ ಕ್ರಿಮಿನಲ್ ಅರ್ಜಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.

ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಪ್ರಕರಣದ ತನಿಖೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಕಾರ್ಯಕ್ರಮದ ತೀರ್ಪುಗಾರರಾದ ತಾರಾ, ಜಗ್ಗೇಶ್ ಹಾಗೂ ಮತ್ತೊಬ್ಬ ಸೆಲೆಬ್ರಿಟಿಯನ್ನೂ ತನಿಖೆಗೆ ಹಾಜರಾಗಬೇಕೆಂದು ಬಯಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಆಗ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಸಿದ ನ್ಯಾಯಪೀಠ, ತೀರ್ಪುಗಾರರನ್ನು ಏಕೆ ಕರೆಸಬೇಕು? ಅವರಿಗೆ ಏಕೆ ತೊಂದರೆ ಕೊಡುತ್ತೀರಿ? ಎಂದು ಪ್ರಶ್ನಿಸಿತು. ಹಾಗೆಯೇ, ತೀರ್ಪುಗಾರರಿಗೆ ಪೊಲೀಸರು ನೀಡಿರುವ ಸಮನ್ಸ್ ಪ್ರತಿ ಎಲ್ಲಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿತು.

ಅರ್ಜಿದಾರರ ಪರ ವಕೀಲರು, ಪೊಲೀಸರು ಸಮನ್ಸ್ ನೀಡಿಲ್ಲ. ಅರ್ಜಿದಾರರು ತನಿಖೆಗೆ ಹಾಜರಾದ ಸಂದರ್ಭದಲ್ಲಿ ನಮ್ಮ ಮೂಲಕ ತೀರ್ಪುಗಾರರನ್ನು ಕರೆಸುವ ಯತ್ನ ಮಾಡುತ್ತಿದ್ದಾರೆ. ಅವರ ವಿಳಾಸ ಮತ್ತಿತರ ವಿವರಗಳನ್ನು ನೀಡುವಂತೆ ಹೇಳುತ್ತಿದ್ದಾರೆ ಎಂದರು.

ಅರ್ಜಿ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದ ಪೀಠ, ಪ್ರಕರಣ ಸಂಬಂಧ ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದಿನ ವಿಚಾರಣೆವರೆಗೆ ವಿಸ್ತರಿಸಿತು.

https://www.newsics.com/2026/02/21/us-court-puts-brakes-on-trump-administrations-tax-weapon/

TAGGED:Police notice to judges for mocking Hindu deities on Comedy Khiladigalu show
Share This Article
Facebook Twitter Copy Link Print
Previous Article ಸುಂಕ ಕಾನೂನುಬಾಹಿರ: ಟ್ರಂಪ್‌ಗೆ ಯುಎಸ್‌ ಕೋರ್ಟ್‌ನಿಂದಲೇ ಛೀಮಾರಿ -ನ್ಯಾಯಾಧೀಶರನ್ನು ಮೂರ್ಖರು ಎಂದ ಟ್ರಂಪ್!
Next Article ಮುಂಬೈ ಬೀದಿಗಳಲ್ಲಿ ಯಶ್ ಮುಖ ಮುಚ್ಚಿಕೊಂಡು ಓಡಾಡಿದ್ದು ಏಕೆ?

Popular Posts

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read

You Might Also Like

ಪ್ರಮುಖವಿದೇಶ

Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ

1 Min Read
ಪ್ರಮುಖದೇಶ

Sonam Wangchuk ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯಗೊಳಿಸಲು ಕಸರತ್ತು ನಡೆಸಿದವರು ಯಾರು? ಇಲ್ಲಿದೆ ಅಸಲಿ ಕಥೆ

2 Min Read
ಪ್ರಮುಖಕರ್ನಾಟಕ

Rain Alert ಕರ್ನಾಟಕದಲ್ಲಿ ಮುಂದಿನ 7 ದಿನಗಳ ಕಾಲ ವರುಣನ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

1 Min Read
ಕರ್ನಾಟಕಪ್ರಮುಖ

AI Teacher ಸರ್ಕಾರಿ ಶಾಲೆಗೆ ಬರಲಿದ್ದಾರೆ AI ಟೀಚರ್‌! ರಾಜ್ಯದ 1,642 ಪ್ರೌಢಶಾಲೆಗಳಲ್ಲಿ ಎಐ ಕೋರ್ಸ್ ಶುರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?