Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಿಗೂಢವಾಗುತ್ತಲೇ ಇದೆ ಸಿಜೆ ರಾಯ್ ಆತ್ಮ*ಹ*ತ್ಯೆ ಕಾರಣ, ತನಿಖೆ ವೇಳೆ ಹೊರಬರುತ್ತಲೇ ಇದೆ ಹೊಸ ಹೊಸ ವಿಚಾರ
ಕರ್ನಾಟಕದೇಶಪ್ರಮುಖಮನರಂಜನೆ

ನಿಗೂಢವಾಗುತ್ತಲೇ ಇದೆ ಸಿಜೆ ರಾಯ್ ಆತ್ಮ*ಹ*ತ್ಯೆ ಕಾರಣ, ತನಿಖೆ ವೇಳೆ ಹೊರಬರುತ್ತಲೇ ಇದೆ ಹೊಸ ಹೊಸ ವಿಚಾರ

Share
2 Min Read
SHARE

https://youtube.com/shorts/2Z4I0oFUbOQ?si=E_8G5fLxr2N6s9QC

Subscribe ನ್ಯೂಸಿಕ್ಸ್ ಕನ್ನಡ

newsics.com

ಬೆಂಗಳೂರು: ಉದ್ಯಮಿ ಸಿಜೆ ರಾಯ್‌ ಅವರು ಕಳೆದ ಆರು ತಿಂಗಳಿನಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ಪೊಲೀಸರ ಈವರೆಗಿನ ತನಿಖೆಯಿಂದ ತಿಳಿದುಬಂದಿದೆ.

ರಾಯ್‌ ಅವರು ರಾಜ್ಯವಲ್ಲದೇ ದೇಶ, ವಿದೇಶಗಳಲ್ಲೂ ಸುಮಾರು 8 ಸಾವಿರ ಕೋಟಿಗೂ ಹೆಚ್ಚು ಸ್ಥಿರ-ಚರ ಆಸ್ತಿ ಹೊಂದಿದ್ದಾರೆ.

ಆದರೆ ಅವರು ಹೂಡಿಕೆಗೆ ಎಲ್ಲಿಯೂ ಬ್ಯಾಂಕ್‌ ಸಾಲ ಮಾಡಿಲ್ಲ ಎಂದು ತಿಳಿದುಬಂದಿದೆ.

ಬ್ಯಾಂಕ್‌ ಸಾಲವಿಲ್ಲದೆ ಇಷ್ಟೊಂದು ಅಪಾರ ಪ್ರಮಾಣದ ಹಣ ಅವರಿಗೆ ಎಲ್ಲಿಂದ ಬಂತು ಎಂಬುದು ಎಲ್ಲ ಉದ್ಯಮಿಗಳ ಪ್ರಶ್ನೆಯಾಗಿದೆ.

ಇವರ ಹೊಸ ಯೋಜನೆಗಳಿಗೆ ಕೆಲವು ರಾಜಕೀಯ ಗಣ್ಯ ವ್ಯಕ್ತಿಗಳು, ಕೆಲ ಉನ್ನತ ಮಟ್ಟದ ಅಧಿಕಾರಿಗಳು ಹೂಡಿಕೆ ಮಾಡಿದ್ದಾರೆ ಎಂಬುದು ಸಹ ತಿಳಿದುಬಂದಿದೆ.

ಈ ಹಣದ ಪೈಕಿ ಬಹುಪಾಲು ಅಕ್ರಮ ಹಣ (ಬ್ಲ್ಯಾಕ್‌ ಮನಿ)ಆಗಿರಬಹುದೆಂದು ತನಿಖಾ ಸಂಸ್ಥೆಗಳಿಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕಾನ್ಫಿಡೆಂಟ್‌ ಸಂಸ್ಥೆ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ಮಾಡುತ್ತಿದ್ದುದರಿಂದ ಇವರ ಬಳಿ ಹೂಡಿಕೆ ಮಾಡಿದ್ದ ಹಣ ವಾಪಸ್‌‍ ಕೊಡುವಂತೆ ರಾಜಕಾರಣಿಗಳು, ಗಣ್ಯವ್ಯಕ್ತಿಗಳು, ಉನ್ನತ ಮಟ್ಟದ ಅಧಿಕಾರಿಗಳು ಒತ್ತಾಯಿಸುತ್ತಿದ್ದರೆಂಬ ಅನುಮಾನ ಈಗ ವ್ಯಕ್ತವಾಗಿದೆ.

ಒಂದು ವೇಳೆ ದಾಳಿ ಸಂದರ್ಭದಲ್ಲಿ ರಾಯ್‌ ಅವರು ತಮ್ಮ ಹೆಸರು ಎಲ್ಲಿ ಬಾಯ್ಬಿಡುತ್ತಾರೋ ಎಂಬ ಆತಂಕದಲ್ಲಿ ಹಣ ವಾಪಸ್‌‍ ಕೊಡುವಂತೆ ಅವರುಗಳೆಲ್ಲರೂ ಒತ್ತಾಯಿಸುತ್ತಿದ್ದರೆಂಬ ಕಾರಣಕ್ಕೆ ರಾಯ್‌ ಅವರು ಒತ್ತಡಕ್ಕೆ ಒಳಗಾಗಿದ್ದರೇ ಎಂಬ ಸಂಶಯ ಅಲ್ಲಗಳೆಯುವಂತಿಲ್ಲ.

ಐಟಿ ಅಧಿಕಾರಿಗಳಲ್ಲದೇ ಕೇಂದ್ರ ತನಿಖಾ ಸಂಸ್ಥೆಗಳೂ ರಾಯ್‌ ಅವರ ವ್ಯವಹಾರದತ್ತ ಕಣ್ಣಿಟ್ಟಿದ್ದವು. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ರಾಯ್‌ ಅವರು ಕಳೆದ ಆರು ತಿಂಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ರಾಯ್‌ ಅವರು ಕರ್ನಾಟಕ, ಕೇರಳ ಅಲ್ಲದೇ ದುಬೈ ಸೇರಿದಂತೆ ವಿದೇಶಗಳಲ್ಲಿಯೂ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದರು.

ರಾಯ್‌ ಅವರ ಹೊಸ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸುಆಗದ ಪರಿಣಾಮ ಹಣಕಾಸು ನಿರ್ವಹಣೆಯಲ್ಲಿ ಅವರು ವಿಫಲರಾಗಿದ್ದರು ಎಂಬ ಮಾತು ಕೇಳಿ ಬಂದಿದೆ.

ತಮ್ಮ ಜೀವನಶೈಲಿಯ ಅನುಗುಣಕ್ಕನುಸಾರವಾಗಿ ರಾಯ್‌ ಅವರು ಆದಾಯದ ಬಹುಪಾಲನ್ನು ಖರ್ಚು ಮಾಡುತ್ತಿದ್ದುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು ಎಂಬುದು ಕಂಡುಬಂದಿದೆ.

ಒಂದೆಡೆ ಹಣ ಹೂಡಿದವರ ಒತ್ತಡ, ಮತ್ತೊಂದೆಡೆ ಆದಾಯ ತೆರಿಗೆ ಹಾಗೂ ಇತರೆ ಏಜೆನ್ಸಿಗಳ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೆ ರಾಯ್‌ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

ಈ ಎಲ್ಲಾ ಒತ್ತಡಗಳು ಒಂದೇ ಬಾರಿಗೆ ರಾಯ್‌ ಅವರ ಜೀವನದಲ್ಲಿ ಆವರಿಸಿಕೊಂಡ ಪರಿಣಾಮ ಅದರಿಂದ ಹೊರಬರಲಾರದೆ ಆತ್ಮಹತ್ಯೆಯ ನಿರ್ಧಾರ ಮಾಡಿ ತಮ್ಮ ಪ್ರಾಣ ತ್ಯಜಿಸಿದರೇ ಎಂಬೆಲ್ಲಾ ಅಂಶಗಳು ವ್ಯಕ್ತವಾಗುತ್ತಿವೆ.

ರಾಯ್‌ ಅವರು ಮೇಲ್ನೋಟಕ್ಕೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಕಂಡು ಬಂದಿದ್ದು, ಒಟ್ಟಾರೆ ರಾಯ್‌ ಅವರ ಆತ್ಮಹತ್ಯೆಗೆ ನಿಖರ ಕಾರಣವೇನೆಂಬುವುದರ ಬಗ್ಗೆ ಎಸ್‌‍ಐಟಿ ಪೊಲೀಸರು ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿದುಬರಲಿದೆ.

ರಾಯ್ 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ‘75’ರ ಹಿಂದಿನ ರಹಸ್ಯವೇನು?

ಕೊನೆಗೂ ಸಿಕ್ತು ಉದ್ಯಮಿ ಸಿಜೆ ರಾಯ್ ಡೆತ್ ನೋಟ್ ; ಸುಸೈಡ್ ನೋಟ್ ನಲ್ಲೇನಿದೆ?

TAGGED:new details keep emerging.The reason for CJ Roy's suicide continues to be a mystery
Share This Article
Facebook Twitter Copy Link Print
Previous Article ವೃದ್ಧೆ ಕೊಲೆಗೈದು 73 ಗ್ರಾಂ. ಚಿನ್ನಾಭರಣ ದರೋಡೆ
Next Article ಶಾಸ್ತ್ರೋಕ್ತವಾಗಿ ನಡೆಯದ ಮದುವೆ ಅಮಾನ್ಯ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

Popular Posts

New Education Minister Pralhad Joshi’s first reactionq ಕರ್ತವ್ಯಪ್ರಜ್ಞೆ, ವಿನಮ್ರತೆಯಿಂದ ಜವಾಬ್ದಾರಿ ಸ್ವೀಕರಿಸುತ್ತೇನೆ: ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಮೊದಲ ಮಾತು

1 Min Read

Anahat Singh World Junior Squash ವಿಶ್ವ ಜೂನಿಯರ್ ಸ್ಕ್ವಾಶ್‌ನಲ್ಲಿ ಇತಿಹಾಸ ಬರೆದ ಅನಾಹತ್ ಸಿಂಗ್: ಚಿನ್ನ ಗೆದ್ದ ಮೊದಲ ಭಾರತೀಯ

1 Min Read

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

You Might Also Like

ಪ್ರಮುಖದೇಶ

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read
ಪ್ರಮುಖಆರೋಗ್ಯ

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read
ಪ್ರಮುಖವಿದೇಶ

Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ

1 Min Read
ಪ್ರಮುಖದೇಶ

Sonam Wangchuk ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯಗೊಳಿಸಲು ಕಸರತ್ತು ನಡೆಸಿದವರು ಯಾರು? ಇಲ್ಲಿದೆ ಅಸಲಿ ಕಥೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?