https://youtube.com/shorts/qpCJajqGxrE?si=vJgoarkrMD0AAjgU
Subscribe ನ್ಯೂಸಿಕ್ಸ್ ಕನ್ನಡ
newsics.com
ಮೋದಿ ಶುಕ್ರವಾರ ಕೇರಳಕ್ಕೆ ಆಗಮಿಸಿದ ವೇಳೆ ಅಪರೂಪದ ಘಟನೆಯೊಂದು ನಡೆದಿದೆ. ತಿರುವನಂತಪುರಂನಲ್ಲಿ ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಅವರು ಪಾಲ್ಗೊಂಡರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಪುಟ್ಟ ಬಾಲಕನೊಬ್ಬನ ಜತೆ ಸಂವಹನ ನಡೆಸಿದರು. ಸದ್ಯ ಅಪರೂಪದ ಕ್ಷಣದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಈ ಸಮಾವೇಶದಲ್ಲಿ ಭಾಗವಹಿಸಿದ ಬಾಲಕ ನೀಲಿ ಸೂಟ್ ಮತ್ತು ಬಹು ಬಣ್ಣದ ಪೇಟದಲ್ಲಿರುವ ಮೋದಿಯ ಚಿತ್ರವನ್ನು ಬಿಡಿಸಿ ಅದನ್ನು ಪ್ರದರ್ಶಿಸುತ್ತಿದ್ದ. ತುಂಬ ಹೊತ್ತು ಆ ಬಾಲಕ ತನ್ನ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ ಮೋದಿ ಆತನ ಜೊತೆ ಮಾತನಾಡಿದರು.
ʼʼನೀನು ತುಂಬ ಸಮಯದಿಂದ ನಿಂತಿದ್ದಿ. ಸುಸ್ತಾಗಿರುತ್ತದೆ. ಆ ಚಿತ್ರದ ಹಿಂದೆ ಹೆಸರು, ವಿಳಾಸ ಬರೆದು ಕೊಡು. ನಾನು ನಿನಗೆ ಪತ್ರ ಬರೆಯುತ್ತೇನೆʼʼ ಎಂದು ಮೋದಿ ಹೇಳಿದ್ದಾರೆ. ಬಳಿಕ ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ) ಸಿಬ್ಬಂದಿಗೆ ಚಿತ್ರವನ್ನು ಪಡೆಯುವಂತೆ ಅವರು ಸೂಚಿಸಿದ್ದಾರೆ. ”ಇದು ಈ ಮಗುವಿನ ಪ್ರೀತಿ ಮತ್ತು ಆಶೀರ್ವಾದಗಳನ್ನು ಹೊಂದಿದೆ. ದಯವಿಟ್ಟು ಅದನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ” ಎಂದು ಪ್ರಧಾನಿ ಭಾಷಣ ಮಧ್ಯೆಯೇ ಹೇಳಿದ್ದಾರೆ.
https://x.com/ANI/status/2014591716981145707?ref_src=twsrc%5Etfw%7Ctwcamp%5Etweetembed%7Ctwterm%5E2014591716981145707%7Ctwgr%5E1a4851fa5cdf2874030b90f9e14d26fe4dd8ff78%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಸೌಜನ್ಯಕ್ಕೂ ನನ್ನ ಹೆಸರು ಹೇಳಲಿಲ್ಲ; ’45’ ಸಿನಿಮಾದ ಟೈಟಲ್ ಕುರಿತು ನಟ ಮಿತ್ರ ಹೇಳಿದ್ದೇನು?