Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್ ಜೋರಾಗಿದೆ. ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ರಾಧಿಕಾ ಪಂಡಿತ್, ಕ್ರಿಸ್ಮಸ್ ಹಬ್ಬವನ್ನು ಕೂಡ ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ. ಮಕ್ಕಳ ಜೊತೆಗೆ ಕ್ರಿಸ್ಮಸ್ ಆಚರಿಸಿದ್ದಾರೆ.
ರಾಧಿಕಾ ಪಂಡಿತ್ ಅವರು ಮನೆಯಲ್ಲಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ್ದಾರೆ. ಇದಕ್ಕೆ ಲೈಟಿಂಗ್ ಮಾಡಲಾಗಿದೆ. ಈ ಫೋಟೋಗಳು ಗಮನ ಸೆಳಯೋ ರೀತಿಯಲ್ಲಿ ಇದೆ. ರಾಧಿಕಾ ಜೊತೆ ಯಥರ್ವ್ ಹಾಗೂ ಆಯ್ರಾ ಕೂಡ ಇದ್ದಾರೆ. ಇವರು ಕ್ಯೂಟ್ ಆಗಿ ಕಾಣಿಸಿದ್ದಾರೆ.
ರಾಧಿಕಾ ಪಂಡಿತ್ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಅವರು ಯಶ್ ವೃತ್ತಿ ಜೀವನಕ್ಕೆ ಬೆಂಬಲ ನೀಡುತ್ತಿದ್ದಾರೆ. ಯಥರ್ವ್ ಹಾಗೂ ಆಯ್ರಾ ಬಗ್ಗೆ ರಾಧಿಕಾ ಗಮನ ಹರಿಸುತ್ತಿರುವುದರಿಂದ ಯಶ್ ಅವರು ಯಾವುದೇ ಚಿಂತೆ ಇಲ್ಲದೆ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗುತ್ತಿದ್ದಾರೆ.
https://www.instagram.com/p/DSrUr7iEh2H/?igsh=cjU5d3NnZmVrMzBt