Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಸಿಲಿಕಾನ್ ಸಿಟಿಯ ರೈಲ್ವೆ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಮತ್ತೊಂದು ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಬೈಯ್ಯಪ್ಪನಹಳ್ಳಿಯ ಸರ್ ಎಂ.ವಿ. ಟರ್ಮಿನಲ್ ನಂತರ, ಇದು ನಗರದಲ್ಲಿ ನಿರ್ಮಾಣಗೊಳ್ಳಲಿರುವ ನಾಲ್ಕನೇ ಬೃಹತ್ ಟರ್ಮಿನಲ್ ಆಗಿದೆ.
ಒಟ್ಟು 20 ಎಕರೆ ವಿಸ್ತೀರ್ಣದ ಜಾಗದಲ್ಲಿ, 6 ಸಾವಿರ ಕೋಟಿ ರೂಪಾಯಿ ವೆಚ್ಚದೊಂದಿಗೆ ಮಲ್ಟಿ ಲೆವಲ್ ರೈಲ್ವೆ ಸ್ಟೇಷನ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೀತಿಯಲ್ಲಿ ಇದು ಇರಲಿದೆ ಎನ್ನಲಾಗಿದೆ.
ಟರ್ಮಿನಲ್ ಅನ್ನು ಸುಮಾರು 20 ಎಕರೆಗಳಲ್ಲಿ ನಿರ್ಮಿಸುವ ಪ್ಲ್ಯಾನ್ ಮಾಡಲಾಗಿದೆ. 16 ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲಾಗುತ್ತೆ. ಇದರಲ್ಲಿ ಒಟ್ಟು 192 ಎಕರೆ ಹೊಂದಿರುವ ರೈಲ್ವೇ ವೀಲ್ಹ್ ಫ್ಯಾಕ್ಟರಿ ಭೂಮಿಯಿಂದ ಸುಮಾರು 15 ಎಕರೆಗಳನ್ನು ತೆಗೆದುಕೊಳ್ಳಲಾಗುವುದು. ಸುಮಾರು ಎರಡು ಎಕರೆ ಖಾಸಗಿ ಭೂಮಿ, ಜೊತೆಗೆ ಅಸ್ತಿತ್ವದಲ್ಲಿರುವ ಯಲಹಂಕ ಸ್ಟೇಷನ್ ಯಾರ್ಡ್ ಮತ್ತು RWF ಸಿಬ್ಬಂದಿ ಕ್ವಾರ್ಟರ್‌ಗಳ ಬಳಕೆ ಮಾಡಲಾಗುತ್ತೆ. ಪ್ರಸ್ತುತ ಯಲಹಂಕ ನಿಲ್ದಾಣವು ಐದು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. ಟರ್ಮಿನಲ್ 10 ಸ್ಟೇಬ್ಲಿಂಗ್ ಲೈನ್‌ಗಳು ಮತ್ತು 15 ಪಿಟ್ ಲೈನ್‌ಗಳನ್ನು ಹೊಂದುವ ಸಾಧ್ಯತೆಯಿದೆ.
ನಾವು ಐದು ಹಂತಗಳನ್ನು ಹೊಂದಿರುವ ವಿಮಾನ ನಿಲ್ದಾಣದಂತಹ ರೈಲ್ವೆ ಟರ್ಮಿನಲ್ ಅನ್ನು ಪ್ರಸ್ತಾಪಿಸುತ್ತಿದ್ದೇವೆ . ನೆಲಮಾಳಿಗೆ, ನೆಲ ಮಹಡಿ, ಹಂತ 1, ಹಂತ 2 ಮತ್ತು ಹಂತ 3 ಸೇರಿದಂತೆ ಕಾನ್ಕೋರ್ಸ್, ಮೆಜ್ಜನೈನ್ ಮಹಡಿ, ಪ್ಲಾಟ್‌ಫಾರ್ಮ್‌ಗಳು ಮತ್ತು ಭೂಗತ ನೆಲಮಾಳಿಗೆಯನ್ನು ಒಳಗೊಂಡಿದೆ. ರೈಲು ಹಳಿಗಳು ನೆಲಮಾಳಿಗೆ ಮತ್ತು ನೆಲಮಹಡಿ ಮಟ್ಟದಲ್ಲಿ ಚಲಿಸುತ್ತವೆ. ಇದು ದೇಶದ ಮೊದಲ ಸಂಪೂರ್ಣ ಎತ್ತರದ( ಎಲಿವೇಟೆಡ್) ರೈಲ್ವೆ ಟರ್ಮಿನಲ್ ಆಗಿರುತ್ತದೆ ಎಂದು ನೈಋತ್ಯ ರೈಲ್ವೇಯ (SWR) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
https://www.newsics.com/2025/12/25/private-bus-catches-fire-more-than-17-people-burnt-alive/