Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಮದುವೆ ಚೌಟ್ರಿಗಳನ್ನೇ ಟಾರ್ಗೆಟ್ ಮಾಡಿ ಚಿನ್ನಾಭರಣ ಎಗರಿಸುತ್ತಿದ್ದ ಕನ್ನಡ ಪ್ರಾಧ್ಯಾಪಕಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.
ಬೆಳ್ಳಂದೂರು ಬಳಿಯ ಖಾಸಗಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿರುವ ರೇವ ವಾರಪೂರ್ತಿ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮಕ್ಕಳಿಗೆ ಪಾಠ ಮಾಡ್ತಿದ್ದ ಈ ಪ್ರಾಧ್ಯಾಪಕಿ, ಭಾನುವಾರ ಮಾತ್ರ ಕಳ್ಳತನ ನಡೆಸುತ್ತಿದ್ದಳು.
ಸಂಬಂಧಿಕರ ರೀತಿಯಲ್ಲಿ ಮದುವೆ ಚೌಟ್ರಿಗೆ ಎಂಟ್ರಿಯಾಗುತ್ತಿದ್ದ ಈಗೆ ಅನುಮಾನ ಬಾರದಂತೆ ಎಲ್ಲರನ್ನೂ ಮಾತಾಡಿಸುತ್ತಿದ್ದಳು. ಬಳಿಕ ಚಿನ್ನಾಭರಣ ಎಗರಿಸೋದಲ್ಲದೆ, ಮದುವೆ ಊಟವನ್ನೂ ಮಾಡ್ಕೊಂಡು ಎಸ್ಕೇಪ್ ಆಗುತ್ತಿದ್ದಳು ಎಂಬುದು ಪೊಲೀಸರ ತನಿಖೆ ವೇಳೆ ಬಯಲಾಗಿದೆ.
ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿಯೂ ಈಕೆ ಕೈಚಳಕ ತೋರಿದ್ದು, ಚಿನ್ನಾಭರಣ ಕದ್ದಿದ್ದಳು. ರೇವತಿ ಮೂಲತಃ ಶಿವಮೊಗ್ಗದವಳು ಎನ್ನಲಾಗಿದ್ದು, ಬೆಂಗಳೂರಿನ ಕೆ.ಆರ್. ಪುರಂನಲ್ಲಿ ವಾಸವಿದ್ದಳು. ಭಾನುವಾರ ಬೆಂಗಳೂರನ್ನ ರೌಂಡ್ಸ್ ಹಾಕ್ತಿದ್ದ ಈಕೆ ಮದುವೆ ಇರುವ ಚೌಟ್ರಿಗಳನ್ನೇ ಟಾರ್ಗೆಟ್ ಮಾಡಿ ಎಂಟ್ರಿಯಾಗ್ತಿದ್ದಳು. ವಿಚಾರಣೆ ವೇಳೆ ಒಟ್ಟು ಮೂರು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿರೋದು ಗೊತ್ತಾಗಿದೆ.