Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > New trend ಇದೇನಿದು ಟ್ರೆಂಡ್? ಮದುವೆಗೂ ಮುನ್ನವೇ ಗರ್ಭಿಣಿ ಆಗೋದಾ?
ಕರ್ನಾಟಕಪ್ರಮುಖಮನರಂಜನೆ

New trend ಇದೇನಿದು ಟ್ರೆಂಡ್? ಮದುವೆಗೂ ಮುನ್ನವೇ ಗರ್ಭಿಣಿ ಆಗೋದಾ?

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಇತ್ತೀಚಿನ ದಿನಗಳಲ್ಲಿ ವಿವಿಧ ಚಾನೆಲ್ಗಳಲ್ಲಿ ಪ್ರಸಾರವಾಗುವ ಸೀರಿಯಲ್ಗಳ ನಾಯಕಿಯರು ಮದುವೆಗೂ ಮುನ್ನ ಗರ್ಭಿಣಿಯಾಗ್ತಿದ್ದಾರೆ.

ಹಲವು ಸೀರಿಯಲ್‌ಗಳ ನಾಯಕಿಯರು ಮದುವೆಗೂ ಮುನ್ನವೇ ಗರ್ಭಿಣಿಯರಾಗುವ ಕತೆಯನ್ನೇ ಧಾರಾವಾಹಿಗಳಲ್ಲಿ ತೋರಿಸಲಾಗುತ್ತಿದೆ. ಇಂಥದೊಂದು ವಿಚಿತ್ರ ಟ್ರೆಂಡ್ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ.

ಟಿಆರ್‌ಪಿಯಲ್ಲಿ ಟಾಪ್ ಇರುವ ಝಿ ಕನ್ನಡದ ಕರ್ಣ ಸೀರಿಯಲ್ ಅನ್ನೇ ತೆಗೆದುಕೊಳ್ಳಿ. ಸದ್ಯ ನಿತ್ಯಾ ಗರ್ಭಿಣಿಯಾಗಿದ್ದಾಳೆ. ಇವಳು ಗರ್ಭಿಣಿಯಾಗಿರುವುದು ಲವರ್ ತೇಜಸ್ನಿಂದಾಗಿ. ಆದರೆ ಆತ ಕಿಡ್ನ್ಯಾಪ್ ಆಗಿರೋ ಕಾರಣ, ಅನಿವಾರ್ಯವಾಗಿ ಕರ್ಣನನ್ನು ಮದುವೆಯಾಗುವ ನಾಟಕವಾಡಿದ್ದಾಳೆ. ಕರ್ಣ ಸದ್ಯ ಆ ಮಗುವಿಗೆ ತಾನೇ ಅಪ್ಪ ಆಗುತ್ತೇನೆ ಎನ್ನುತ್ತಿದ್ದಾನೆ.

ಇನ್ನು, ಝಿ ಕನ್ನಡದಲ್ಲೇ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯದಲ್ಲಿ ನಾಯಕಿ ಅಲ್ಲದಿದ್ದರೂ ಸಾವಿತ್ರಿ ಗರ್ಭಿಣಿಯಾಗಿದ್ದಾಳೆ. ಮಾಲೀಕನ ಮಗನನ್ನೇ ನಂಬಿ ಮೋಸ ಹೋಗಿದ್ದಾಳೆ. ಅವನ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಮೈ ಕೊಟ್ಟುಬಿಟ್ಟಿದ್ದಾಳೆ. ಇನ್ನೇನು ಅವನು ಕೈಕೊಟ್ಟು ಹೋಗುತ್ತಾನೆ ಎಂದು ತಿಳಿದಾಗ ಶ್ರಾವಣಿ, ಅವನ ಜತೇನೇ ಮದುವೆ ಮಾಡಿಸಿದ್ದಾಳೆ.

ಮದುವೆಯೇನೋ ಆಗಿದೆ. ಆದರೆ ಒಲ್ಲದ ಮದುವೆಯಿಂದ ಸಾವಿತ್ರಿಯ ಬಾಳು ಹೇಳತೀರದ ಕಷ್ಟಕ್ಕೆ ಸಿಲುಕಿದೆ.

ಅಮೃತಧಾರೆ ಸೀರಿಯಲ್ನಲ್ಲಿಯೂ ಅದೇ ಕಥೆ. ಜೈದೇವನ ಮಾತಿಗೆ ಮನಸೋತು ಮಲ್ಲಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾಗಿದ್ದಳು. ಭೂಮಿಕಾ ನೆರವಿನಿಂದ ಜೈದೇವನನ್ನು ಮದುವೆಯಾದರೂ ಅವನ ಮೋಸದಾಟಕ್ಕೆ ಬಲಿಯಾಗಿ ಮಗುವನ್ನು ಕಳೆದುಕೊಂಡಳು. ಈಗ ಗಂಡನಿಂದಲೂ ದೂರವಾಗಿದ್ದಾಳೆ.

ಉದಯ ಟಿವಿಯ ವಿಷಯಕ್ಕೆ ಬರುವುದಾದರೆ ಮೈನಾ ಸೀರಿಯಲ್ನಲ್ಲಿ ಮೈನಾಳ ಮೇಲೆ ಫಂಕ್ಷನ್ ಒಂದರಲ್ಲಿ ನಡೆದ ಮೋಸದಿಂದ ಆಕೆ ಗರ್ಭ ಧರಿಸಿದ್ದಾಳೆ. ಆದರೆ ಆತ ಯಾರು ಎನ್ನುವುದು ತಿಳಿಯದೇ ಅವಳ ಸ್ಥಿತಿ ಅಲ್ಲೋಲಕಲ್ಲೋಲವಾಗಿದೆ.

ಸಿಂಧು ಭೈರವಿ ಸೀರಿಯಲ್ನಲ್ಲಿ ಕೂಡ ಲವರ್ ನಿಂದ ನಾಯಕಿ ಮದುವೆಗೂ ಮುನ್ನವೇ ಗರ್ಭ ಧರಿಸಿದ್ದಾಳೆ. ಕೊನೆಗೆ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಮದುವೆಯಾಗಿದ್ದಾಳೆ. ಸಾಯುವ ಹಂತಕ್ಕೂ ಹೋಗಿದ್ದ ಈಕೆ ಕೊನೆಗೂ ಮದುವೆಯಾಗಿರುವುದೇ ಸಮಾಧಾನದ ಸಂಗತಿ.

ಚಿಕ್ಕ ಯಜಮಾನಿ ಸೀರಿಯಲ್ನಲ್ಲಿ ಕೂಡ ನಾಯಕಿ ಕಾವೇರಿ ಲವರ್ ಮಾಡಿರುವ ಮೋಸದಿಂದ ಪ್ರೆಗ್ನೆಂಟ್ ಆಗಿದ್ದಾಳೆ. ಆದರೆ ಪರಿಸ್ಥಿತಿ ಬೇರೆಯದ್ದೇ ಆಗಿದೆ ಇಲ್ಲಿ. ಪ್ರೆಗ್ನೆಂಟ್ ಆಗಿದ್ದೇ ಒಬ್ಬನಿಂದ, ಕೊನೆಗೆ ವಯಸ್ಸಿನಲ್ಲಿ ಸಿಕ್ಕಾಪಟ್ಟೆ ದೊಡ್ಡವನ ಜತೆ ಮದುವೆಯಾಗುವ ಅನಿವಾರ್ಯತೆ ಎದುರಾಗಿದೆ. ಗರ್ಭಪಾತವೂ ಆಗಿದೆ.

ಧಾರಾವಾಹಿಗಳಲ್ಲಿ ಇದೇ ರೀತಿ ಮದುವೆಗೂ ಮುನ್ನವೇ ಮಹಿಳಾ ಕಲಾವಿದೆಯರು ಗರ್ಭಿಣಿಯರಾಗುವ ಸನ್ನಿವೇಶವನ್ನೇ ತೋರಿಸುತ್ತಾ ಬಂದರೆ, ಅದನ್ನೇ ನೋಡುವ ಜನರ ಮನಸ್ಸಿನಲ್ಲಿ ಎಂಥ ಭಾವನೆ ಮೂಡಬಹುದು ಎನ್ನುವ ಪ್ರಶ್ನೆ‌ ವ್ಯಾಪಕವಾಗಿದೆ. ಧಾರಾವಾಹಿ ಹಾಗೂ ಅವುಗಳಲ್ಲಿ ನಟಿಸುವ ಹಲವು ಕಲಾವಿದೆಯರ‌ ಅಭಿಮಾನಿಗಳಿಗೆ ಎಂತಹ ಸಂದೇಶ ರವಾನೆಯಾಗಬಹುದು?

ವಿದ್ಯಾರ್ಥಿನಿ ಜತೆ ಪ್ರಾಂಶುಪಾಲ ಅಸಭ್ಯ ವರ್ತನೆ: ದೂರು ದಾಖಲಿಸಿಕೊಳ್ಳಲು ಪೊಲೀಸರು ನಕಾರ

TAGGED:What is this trend? Getting pregnant before marriage?
Share This Article
Facebook Twitter Copy Link Print
Previous Article ವಿದ್ಯಾರ್ಥಿನಿ ಜತೆ ಪ್ರಾಂಶುಪಾಲ ಅಸಭ್ಯ ವರ್ತನೆ: ದೂರು ದಾಖಲಿಸಿಕೊಳ್ಳಲು ಪೊಲೀಸರ ನಕಾರ
Next Article ಮುಂದಿನ ಐದು ದಿನ ರಾಜ್ಯದಲ್ಲಿ ವಿಪರೀತ ಚಳಿ; ಉತ್ತರ ಕರ್ನಾಟಕದ 9 ಜಿಲ್ಲೆಗೆ ಆರೆಂಜ್‌ ಅಲರ್ಟ್‌

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?