Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ಅಭಿನಯದ ಬಹುನಿರೀಕ್ಷಿತ ದಿ ಡೆವಿಲ್ (Devil Movie) ಗುರುವಾರ (ಡಿ.11) ರಾಜ್ಯಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದ್ದು, ಈಗಾಗಲೇ ಬೆಂಗಳೂರು, ಕೋಟೆ ನಾಡು, ಮೈಸೂರು ಹೀಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಡೆವಿಲ್ ಸಿನಿಮಾವನ್ನು ದರ್ಶನ್ ಫ್ಯಾನ್ಸ್ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಮೊದಲ ದಿನ ಮೊದಲ ಶೋ ಮಾತ್ರವಲ್ಲದೇ ಮೊದಲ ದಿನದ ಬಹುತೇಕ ಶೋಗಳ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು, ಡೆವಿಲ್ ಚಿತ್ರ ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ.
ದಿ ಡೆವಿಲ್ ಸಿನಿಮಾ ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಗುರುವಾರ ಬಿಡುಗಡೆಗೊಂಡಿದೆ. ಬೆಂಗಳೂರಿನಲ್ಲಿ 90ಕ್ಕೂ ಹೆಚ್ಚು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6:30ಕ್ಕೆ ಡೆವಿಲ್ ಪ್ರದರ್ಶನ ಕಙಡಿದೆ.
ಬೆಂಗಳೂರಿನ ನರ್ತಕಿ, ಪ್ರಸನ್ನ, ಸಿದ್ದೇಶ್ವರ, ನವರಂಗ್, ಊರ್ವಶಿ ಸೇರಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬೆಳಗ್ಗೆ 6.30ಕ್ಕೆ ಶೋ ಶುರುವಾಗಲಿದ್ದು, ನವರಂಗ್‌ನಲ್ಲಿ ಎಲ್ಲಾ 5 ಶೋಗಳ ಬಹುತೇಕ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ದರ್ಶನ್ ಜೈಲಿನಲ್ಲಿದ್ದರೂ ಅವರ ಫ್ಯಾನ್ಸ್‌ಗಳ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆ ಆಗಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಮೊದಲ ದಿನದ ಮೊದಲ ಶೋ ಎಲ್ಲೆಡೆ ಸೋಲ್ಡ್ ಔಟ್ ಆಗಿದೆ. ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಇತ್ತ ಟಿಕೆಟ್ ಬೆಲೆ ಗಗನಕ್ಕೇರಿದೆ. ಡೆವಿಲ್ ಸಿನಿಮಾದ ಒಂದು ಟಿಕೆಟ್ ಬೆಲೆ ಸಿಂಗಲ್ ಸ್ಕ್ರೀನ್‌ಗಳಲ್ಲಿ 200-250 ರೂಪಾಯಿಂದ ಆರಂಭವಾದರೆ, ಮಲ್ಟಿಪ್ಲೆಕ್ಸ್‌ಗಳಲ್ಲಿ 500 ರೂಪಾಯಿಂದ ಆರಂಭವಾಗಿದೆ. ಅದರಲ್ಲಿಯೂ ಬೆಂಗಳೂರಿನ ಕೆಲವೆಡೆ 900 ರೂಪಾಯಿಯಿಂದ 1000 ರೂ.ವರೆಗೂ ಟಿಕೆಟ್ ಮಾರಾಟವಾಗಿದೆ.
ರಾಜ್ಯದಲ್ಲಿ ಮೊದಲ ದಿನವೇ ಡೆವಿಲ್ ಭರ್ಜರಿ 18 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಈಗಾಗ್ಲೇ 70 ಸಾವಿರಕ್ಕೂ ಹೆಚ್ಚು ಟಿಕೆಟ್ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಆಗಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಅಂದಾಜು 3.5 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಮಿಲನಾ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾ ಅವಧಿ 2 ಗಂಟೆ 49 ನಿಮಿಷ ಆಗಿದೆ. ಇನ್ನೂ ಸೆನ್ಸಾರ್ ಆಗಿದ್ದು, ಚಿತ್ರಕ್ಕೆ U/A ಸರ್ಟಿಫಿಕೆಟ್ ನೀಡಲಾಗಿದೆ. ಅಂದರೆ 16 ವರ್ಷದೊಳಗಿನವರೂ ಈ ಚಿತ್ರ ನೋಡಬಹುದು.
MBA student loses life ಬೆತ್ತಲೆ ಫೋಟೋ ವೈರಲ್ ಮಾಡುವ ಬೆದರಿಕೆ: ಜೀವ ಕಳೆದುಕೊಂಡ ಎಂಬಿಎ ವಿದ್ಯಾರ್ಥಿ