Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ವಾರ್ಡನ್ ಬೈದಿದ್ದಕ್ಕೆ ನೊಂದು ಹಾಸ್ಟೆಲ್ ಟೆರೇಸ್‌ನಲ್ಲೇ ಜೀವ ಕಳೆದುಕೊಂಡ್ಲಾ ಬಿಎಸ್ಸಿ ವಿದ್ಯಾರ್ಥಿನಿ?: ನಿಗೂಢ ಸಾವು
ಕರ್ನಾಟಕಪ್ರಮುಖ

ವಾರ್ಡನ್ ಬೈದಿದ್ದಕ್ಕೆ ನೊಂದು ಹಾಸ್ಟೆಲ್ ಟೆರೇಸ್‌ನಲ್ಲೇ ಜೀವ ಕಳೆದುಕೊಂಡ್ಲಾ ಬಿಎಸ್ಸಿ ವಿದ್ಯಾರ್ಥಿನಿ?: ನಿಗೂಢ ಸಾವು

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

ಶಿವಮೊಗ್ಗ: ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಅಂಬೇಡ್ಕರ್ ವಸತಿನಿಯಲದಲ್ಲಿ ನಡೆದಿದೆ.

ಮನಿಷಾ (21) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಟೆರೇಸ್ ಮೇಲೆ ಮನಿಷಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶಿವಮೊಗ್ಗದ ಡಿವಿಎಸ್ ಕಾಲೇಜ್‌ನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮನಿಷಾ (21) ಇನ್ನೇನು ಕಾಲೇಜ್‌ಗೆ ಹೋಗುವ ಸಮಯದಲ್ಲಿ ತಿಂಡಿ ಮಾಡಿಕೊಂಡು ಹಾಸ್ಟೆಲ್ ಟೆರೇಸ್ ಮೇಲೆ ಹೋಗಿದ್ದಾಳೆ.

ಆದರೆ ಸ್ವಲ್ಪ ಹೊತ್ತಿನ ಬಳಿಕ ಟ್ಯಾಂಕ್ ಪಕ್ಕದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮನಿಷಾ ಶವ ಪತ್ತೆಯಾಗಿದೆ. ಟೆರೇಸ್ ಮೇಲೆ ಬಟ್ಟೆ ಹಾಕಲು ಹೋಗಿದ್ದ ವಿದ್ಯಾರ್ಥಿನಿಯರು ನೋಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಮಗಳ ಸಾವಿನ ಸುದ್ದಿ ತಿಳಿದ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ. ಮಗಳು ಚೆನ್ನಾಗಿಯೇ ಇದ್ದಳು. ಹತ್ತಿರದಲ್ಲೇ ಇರುವ ತನ್ನ ಊರಿಗೆ ಬಂದು ಹೋಗುತ್ತಿದ್ದಳು. ಆದ್ರೆ ಏಕಾಏಕಿ ಮಗಳು ಮಗಳು ಆತ್ಮಹತ್ಯೆಈ ಜನನ ನ ಇ ಕ ಮಾಡಿಕೊಂಡಿದ್ದಾಳೆ ಎಂದರೆ ಹೆತ್ತವರಿಗೆ ನಂಬಲಾಗುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವುದೇ ಅಂತಹ ದೊಡ್ಡ ಸಮಸ್ಯೆ ಅವಳಿಗೆ ಇರಲಿಲ್ಲ ಎನ್ನುವುದು ಪೋಷಕರ ಮಾತು. ಹೀಗಾಗಿ ಹಾಸ್ಟೆಲ್‌ನಲ್ಲೇ ನೇಣು ಹಾಕಿಕೊಂಡಿರುವುದು ನೂರೆಂಟು ಅನುಮಾನಗಳನ್ನು ಹುಟ್ಟಿಹಾಕಿದೆ.

ಸಾಯುವ ಹಿಂದಿನ ರಾತ್ರಿ ಮನಿಷಾ ಫೋನಿನಲ್ಲಿ ತಾಯಿ ಜತೆ ಮಾತನಾಡಿದ್ದು, ಬೆಳಗ್ಗೆ ಊರಿಗೆ ಬರುತ್ತೇನೆಂದು ಹೇಳಿದ್ದಳು. ಆದ್ರೆ, ಬೆಳಗ್ಗೆ ಊರಿಗೆ ಶವವಾಗಿ ಹೋಗಿದ್ದಾಳೆ. ಬಡತನದ ನಡುವೆ ಮಗಳಿಗೆ ವಿದ್ಯಾಭ್ಯಾಸ ಕೊಡಿಸುವುದೇ ದೊಡ್ಡ ಸವಾಲು ಅಗಿತ್ತು. ಈಗ ಮಗಳ ಸಾವಿನಿಂದ ತಾಯಿಗೆ ದಿಕ್ಕೇ ತೋಚದಂತಾಗಿದೆ.

ಮನಿಷಾ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಬಡತನದ ನಡುವೆಯೇ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಆದ್ರೆ ನಿನ್ನೆ ಮತ್ತು ಇಂದು ಹಾಸ್ಟೆಲ್ ವಾರ್ಡನ್ ಸ್ವಪ್ನಾ ಎಲ್ಲಾ ವಿದ್ಯಾರ್ಥಿನಿಯರ ಮುಂದೆ ಮನಿಷಾಗೆ ಬೈದಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ಸೋದರ ಮಾವ ಮಂಜುನಾಥ್ ನೇರ ಆರೋಪ ಮಾಡಿದ್ದಾರೆ.

ವಾರ್ಡನ್ ಸ್ವಪ್ನಾ, ಮನಿಷಾ ಕುಟುಂಬಸ್ಥರಿಗೆ ಕರೆ ಮಾಡಿ, ಮಾತ್ರೆ ತೆಗೆದುಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದಾರೆ. ಆದರೆ, ನೇಣು ಹಾಕಿಕೊಂಡಿರುವ ಸಂಗತಿ ಬಿಟ್ಟು ಮಾತ್ರೆ ಎಂದು ವಾರ್ಡನ್ ಹೇಳಿದ್ದು ಯಾಕೆ ಎನ್ನುವುದು ಮೃತಳ ಸಂಬಂಧಿಕರ ಪ್ರಶ್ನೆಯಾಗಿದ್ದು, ಸಾವಿನ ಬಗ್ಗೆ ಪೊಲೀಸರು ತನಿಖೆ ಮಾಡಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Relationship ಸಂಗಾತಿಯನ್ನು ತಬ್ಬಿ‌ ಮಲಗಿದರೆ ಹತ್ತಾರು ಪ್ರಯೋಜನ…!

https://www.newsics.com/2025/11/05/lose-weight-7-natural-ways-to-lose-weight-without-starving/

TAGGED:BSc student dies on hostel terrace after being scolded by warden
Share This Article
Facebook Twitter Copy Link Print
Previous Article Relationship ಸಂಗಾತಿಯನ್ನು ತಬ್ಬಿ‌ ಮಲಗಿದರೆ ಹತ್ತಾರು ಪ್ರಯೋಜನ…!
Next Article ಇಂದು ಬಿಹಾರದ ವಿಧಾನಸಭೆ ಮೊದಲ ಹಂತದ ಚುನಾವಣೆ:

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read
ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?