Subscribe ನ್ಯೂಸಿಕ್ಸ್ ಕನ್ನಡ
NewsicsKannada/ YouTube
newsics.com
ಬೆಂಗಳೂರು: ಬ್ರೇಕಪ್ ನೋವಿನಿಂದ ಹೊರ ಬರುವುದು ಅಷ್ಟು ಸುಲಭದ ವಿಷಯವೇ ಅಲ್ಲ. ಇದು ಹೃದಯದಲ್ಲಿ ಅಳಿಸಲಾಗದ ಗಾಯವನ್ನು ಮಾಡುತ್ತದೆ. ಈ ನೋವಿನಿಂದ ಹೊರ ಬರಲಾರದೆ ಖಿನ್ನತೆಗೆ ಜಾರಿದವರು, ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇನ್ನೂ ಅನೇಕರು ಬ್ರೇಕಪ್ ನೋವಿನಿಂದ ಹೊರ ಬರಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಉದ್ಯೋಗಿ ಬ್ರೇಕಪ್ ನೋವಿನಿಂದ ಹೊರಬರಲು 12 ದಿನ ರಜೆ ಕೊಡಿ ಎಂದು ಹೇಳಿದ್ದಾನೆ
ಹೌದು, ʼನಾಟ್ ಡೇಟಿಂಗ್ʼ ಎಂಬ ಸಂಸ್ಥೆಯ ಸಿಇಒ ಜಸ್ವೀರ್ ಸಿಂಗ್ ತನಗೆ ಕೆಲಸಗಾರನೋರ್ವ ಕಳುಹಿಸಿರುವ ರಜೆ ಕೋರಿಕೆ ಇಮೇಲ್ ಅನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅತ್ಯಂತ ಪ್ರಾಮಾಣಿಕ ರಜೆ ಕೋರಿಕೆ ಎಂದಿದ್ದು, ಜೆನ್‌ಝೀಗಳಿಗೆ ಯಾವುದೇ ಮುಚ್ಚುಮರೆ ಇಲ್ಲ ಎಂದಿದ್ದಾರೆ.
ಅಕ್ಟೋಬರ್ 28ರಿಂದ ನವೆಂಬರ್ 8ರ ತನಕ ರಜೆ ಬೇಕೆಂದು ಮೇಲ್ ಮಾಡಿರುವ ಕೆಲಸಗಾರ ನನಗೆ ಇತ್ತೀಚೆಗಷ್ಟೆ ಬ್ರೇಕಪ್ ಆಗಿದ್ದು, ಕೆಲಸದ ಮೇಲೆ ಗಮನಹರಿಸಲು ಆಗುತ್ತಿಲ್ಲ. ಹೀಗಾಗಿ ನನಗೆ ಸಣ್ಣ ಬ್ರೇಕ್ ಬೇಕಿದೆ. ಇಂದು ನಾನು ವರ್ಕ್ ಫ್ರಮ್ ಮಾಡಲಿದ್ದೇನೆ 28ರಿಂದ 8ರವರೆಗೆ ರಜೆ ಬೇಕಿದೆ ಎಂದು ಬರೆದುಕೊಂಡಿದ್ದಾನೆ.
ಈ ಟ್ವೀಟ್ ನೋಡುತ್ತಿದ್ದಂತೆ ನೆಟ್ಟಿಗರು ರಜೆ ಕೊಟ್ರಾ, ಅಯ್ಯೋ ಪಾಪ ಆತನಿಗೆ ರಜೆ ಕೊಟ್ಟುಬಿಡಿ ಎಂದು ಹಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ಸಿಇಒ ತಕ್ಷಣವೇ ರಜೆಯನ್ನು ನೀಡಲಾಗಿದೆ ಎಂದು ರಿಪ್ಲೈ ಮಾಡಿದ್ದಾರೆ.