Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬಿಗ್ ಬಾಸ್ ಶುರುವಾಗಿ ಮೂರು ವಾರ ಕಳೆದಿದೆ. ಮನೆಮಂದಿ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಬಿಗ್‌ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಕಳೆದ (ಭಾನುವಾರ) ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಗೆ ಒಟ್ಟು ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಆಗಮಿಸಿದ್ದರು.
ಅಶ್ವಿನಿ ಗೌಡ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಇಷ್ಟ ಆಗುತ್ತಿಲ್ಲ. ಆ್ಯಂಕರ್ ಜಾನ್ವಿ ಜೊತೆ ಸೇರಿ ಅವರು ಕೂಡ ದಾರಿ ತಪ್ಪುತ್ತಿದ್ದಾರಾ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ. ಬಿಗ್ ಬಾಸ್ ಮನೆಯಲ್ಲಿ ಅವರು ರಕ್ಷಿತಾ ಗೌಡ ಅವರನ್ನು ತುಳಿಯಲು ಪ್ರಯತ್ನಿಸಿದ್ದು ಸ್ಪಷ್ಟವಾಗಿ ಕಾಣಿಸಿತ್ತು.ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಸಾಕಷ್ಟು ಟಗ್ ಆಫ್ ವಾರ್ ನಡೆದಿತ್ತು. ರಕ್ಷಿತಾ ಶೆಟ್ಟಿ ವಿರುದ್ಧ ಸಾಕಷ್ಟು ಕೆಟ್ಟ ಪದಗಳ ಬಳಕೆಯನ್ನು ಅಶ್ವಿನಿ ಅವರು ಮಾಡಿದ್ದರು. ಈ ಕೀಳು ಪದಗಳು ಅಶ್ವಿನಿ ಗೌಡ ಅವರ ಘನತೆಗೆ ಸರಿ ಹೊಂದುವಂತದ್ದು ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಅಶ್ವಿನಿ ಗೌಡ ಅವರ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಈಗ ಅಶ್ವಿನಿ ಗೌಡ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಜೀವನದ ನೀತಿ ಪಾಠ ಮಾಡಿದ್ದರು. ಈ ವಿಡಿಯೋದಲ್ಲಿ ಅವರು, ಬೇರೆಯವರಿಗೆ ಕೆಟ್ಟದ್ದು ಬಯಸಬಾರದು, ಬೇರೆಯವರನ್ನು ತುಳಿಯಬಾರದು ಎಂದು ಹೇಳಿದ್ದರು. ‘ಬೇರೆಯವರ ಅಸಹ್ಯ ಮಾಡಲು ಹೋದಷ್ಟು, ನೀವು ಅಸಹ್ಯ ಆಗ್ತೀರಾ. ನೀವು ಮೊದಲು ತಿಳಿದುಕೊಳ್ಳಬೇಕು. ನಿಮ್ಮ ವ್ಯಕ್ತಿತ್ವ ಎತ್ತಿ ಹಿಡಿಯಬೇಕು. ಯಾವುದೋ ವ್ಯಕ್ತಿಯನ್ನು ಕೀಳು ಮಾಡಲು ಹೋಗಿ ನಿಮ್ಮ ವ್ಯಕ್ತಿತ್ವನ ಹಾಳು ಮಾಡಿಕೊಳ್ಳಬೇಡಿ. ಅವರು ಬದುಕಲಿ, ನೀವು ಬದುಕಿ’ ಎಂದಿದ್ದರು ಅಶ್ವಿನಿ ಗೌಡ.
https://www.instagram.com/reel/DP-zZC2kbEa/?igsh=MWpmYWlxbXMyMXZzNg==