Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಬಟ್ಟೆ ಕಾರ್ಖಾನೆ ಮತ್ತು ರಾಸಾಯನಿಕ ಗೋದಾಮಿನಲ್ಲಿ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ.
ಈ ಎರಡು ಕಟ್ಟಡಗಳು ಬಾಂಗ್ಲಾದೇಶ ಯೂನಿವರ್ಸಿಟಿ ಆಫ್ ಬ್ಯುಸಿನೆಸ್ ಅಂಡ್ ಟೆಕ್ನಾಲಜಿಯ ಮುಂಭಾಗದಲ್ಲಿವೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
“12 ಶವಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಢಾಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬರ್ನ್ ಅಂಡ್ ಪ್ಲಾಸ್ಟಿಕ್ ಸರ್ಜರಿಗೆ ತರಲಾಗಿದೆ” ಎಂದು ಢಾಕಾದ ಅಗ್ನಿಶಾಮಕ ಸೇವಾ ಪ್ರಧಾನ ಕಚೇರಿಯ ಮಾಧ್ಯಮ ಘಟಕದ ಉಸ್ತುವಾರಿ ಅಧಿಕಾರಿ ತಲ್ಹಾ ಬಿನ್ ಜಾಶಿಮ್ ಕ್ಸಿನ್ಹುವಾಗೆ ತಿಳಿಸಿದ್ದಾರೆ.