Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ತಂದೆಯೊಬ್ಬ ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಯೋರೈ ತಾಲ್ಲೂಕಿನ ತಲ್ವಾಡಾ ಗ್ರಾಮದಲ್ಲಿ ನಡೆದಿದೆ.
ಅರ್ಧ ನೀರು ತುಂಬಿರುವ ಡ್ರಮ್ನಲ್ಲಿ ಮಗುವನ್ನು ಎಸೆಯಲಾಗಿತ್ತು. ಬೀಡ್ ಜಿಲ್ಲೆಯ ಜಿಯೋರೈ ತಾಲ್ಲೂಕಿನ ತಲ್ವಾಡಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಡೈಪರ್ ಧರಿಸಿದ್ದ ಮಗು ನೀರಿನಲ್ಲಿ ಮುಖ ಕೆಳಗಾಗಿ ಮಲಗಿತ್ತು,
ಕೆಲವು ದಿನಗಳ ಹಿಂದೆ, ಅಮೋಲ್ ಮತ್ತು ಆತನ ಪತ್ನಿ ಕೌಟುಂಬಿಕ ಕಲಹದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ಅವರನ್ನು ರಕ್ಷಿಸಲಾಗಿತ್ತು.ದಂಪತಿಯನ್ನು ಗುರುವಾರ ಸ್ಥಳೀಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅಮೋಲ್ ಮತ್ತು ಅವರ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಲ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ.