Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Big boss opening ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್: ಯಾರ‌್ಯಾರು ಬಂದ್ರು? ಏನೇನಂದ್ರು?
ಕರ್ನಾಟಕಪ್ರಮುಖಮನರಂಜನೆ

Big boss opening ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್: ಯಾರ‌್ಯಾರು ಬಂದ್ರು? ಏನೇನಂದ್ರು?

Share
3 Min Read
SHARE

Subscribe NewsicsKannada/YouTube

newsics.com

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್‌ ಆಗಿದೆ. ಕಾಕ್ರೋಚ್ ಸುಧಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರಂತಹ ವೈವಿಧ್ಯಮಯ ಸ್ಪರ್ಧಿಗಳು ಇದ್ದು, ಸ್ಪರ್ಧಿಗಳಿಗೂ ಮುನ್ನ ‘ಬ್ರೌನ್ ಗರ್ಲ್’ ಶಿಲ್ಪಿ ದಾಸ್ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.

Brown Girl ಹೆಸರಿನ ಇನ್ಸ್ಟಾಗ್ರಾಮ್ನಿಂದ ಈ ಯುವತಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಬಿಗ್ಬಾಸ್ ಮನೆಯೊಳಕ್ಕೆ ಸ್ಪರ್ಧಿಗಳಿಗಿಂತಲೂ ಮುಂಚಿತವಾಗಿ ನಾನು ಹೋಗಿ ಬಂದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.

ಶಿಲ್ಪಿ ದಾಸ್ ಎಂದು ಬರೆದುಕೊಂಡಿರುವ ಈ ಯುವತಿ ಬೆಂಗಳೂರಿನವರು ಎಂದು ಹೇಳಿಕೊಂಡಿದ್ದಾರೆ. ಆದರೆ ಕನ್ನಡ ಮಾತನಾಡಲು ಬರುವುದಿಲ್ಲ. ಎಐ ದನಿ ನೀಡಿ ಕನ್ನಡ ಮಾತನಾಡಿದ್ದಾರೆ. ಆರಂಭದಲ್ಲಿ ಇಂಗ್ಲಿಷ್ನಲ್ಲಿ ನಾನು ಬಿಗ್ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿರುವ ಇವರು ಕೊನೆಗೆ ಎಐ ಮುದ್ರಿತ ಕನ್ನಡ ಟ್ರಾನ್ಸ್ಲೇಷನ್ ಹಾಕಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್ ಮಿಕ್ಸ್ನಲ್ಲಿ ಬಿಗ್ಬಾಸ್-12ರ ಮನೆಯ ಬಗ್ಗೆ ಅವರು ವಿವರಿಸಿದ್ದಾರೆ. ನಾನು ಬಿಗ್ಬಾಸ್ ಪ್ರವೇಶಿಸಿದೆ. ಅದರಲ್ಲಿಯೂ ಸ್ಪರ್ಧಿಗಳಿಗಿಂತಲೂ ಮುಂಚಿತವಾಗಿ. ಮತ್ತು ಈ ವರ್ಷದ ಥೀಮ್ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಜನರು. ನನ್ನ ಅನುಭವ ತುಂಬಾ ಚೆನ್ನಾಗಿತ್ತು. ಕಲರ್ಸ್ ಕನ್ನಡಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾರೆ.

ಈಗಾಗಲೇ ಕೆಲವು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ತುಳುನಾಡಿನ ಕನ್ನಡತಿ ಅಂತಾನೇ ಗುರುತಿಸಿಕೊಂಡಿರುವ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್ ಕ್ಯೂಟ್ ಮಾತುಗಳಿಂದಲೇ ಫೇಮಸ್ ಆಗಿದ್ದಾರೆ. ಇದೀಗ ಈ ಜನಪ್ರಿಯತೆ ಬಿಗ್‌ಬಾಸ್ ಮನೆಯವರೆಗೂ ಕರೆದುಕೊಂಡು ಬಂದಿದೆ. ಮುಂಬೈನಲ್ಲಿ ಬೆಳೆದಿರುವ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಈ ಕಾರಣದಿಂದಲೇ ರಕ್ಷಿತಾ ಶೆಟ್ಟಿ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತವೆ. ಜನರು ತಮ್ಮನ್ನು ಟ್ರೋಲ್ ಮಾಡಿದರೂ ರಕ್ಷಿತಾ ಶೆಟ್ಟಿ ಮಾತ್ರ ಕನ್ನಡ ಮಾತನಾಡುವುದನ್ನು ನಿಲ್ಲಿಸಿಲ್ಲ.

ಬಿಗ್‌ಬಾಸ್‌ ಸೀಸನ್ 12ರ ಮನೆಗೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಯಾಗಿರುವ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದರು. ಮಲ್ಲಮ್ಮ ಯಾವುದೇ ಸಿನಿಮಾ, ಧಾರಾವಾಹಿಯಲ್ಲಿಯೂ ನಟಿಸಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಮಲ್ಲಮ್ಮ ಅವರಿಗೆ ಬಹುದೊಡ್ಡ ಅವಕಾಶ ಸಿಕ್ಕಿದೆ.

ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮಲ್ಲಮ್ಮ ಅವರು ಸ್ಪರ್ಧಿಯಾಗಿರೋದು ದೃಢಪಟ್ಟಿದೆ. ಮಲ್ಲಮ್ಮ ಅವರ ಮಾತುಗಳನ್ನು ಕೇಳಿ ನಿರೂಪಕ, ನಟ ಸುದೀಪ್‌, ಬಿಗ್‌ಬಾಸ್‌ಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಬಿಗ್‌ಬಾಸ್ ಮಲ್ಲಮ್ಮ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಿರುತೆರೆಯ ಕಲಾವಿದೆ ಮಂಜು ಭಾಷಿಣಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಿಗ್‌ಬಾಸ್‌ ಶೋಗೆ ಹೋಗುತ್ತಿರುವುದನ್ನು ನಟಿ ಖಚಿತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುತ್ತಿರುವುದ್ಯಾಕೆ ಎಂಬುದನ್ನು ಮಂಜು ಭಾಷಿಣಿ ಹೇಳಿದ್ದಾರೆ. ಇಷ್ಟು ವರ್ಷ ಹಲವು ಪಾತ್ರಗಳಲ್ಲಿ ನಟಿಸಿದ್ದು, ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಇದೀಗ ಮಂಜು ಭಾಷಿಣಿಯಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ಇದು ನನ್ನ ಹೊಸ ಪಯಣ ಎಂದು ಮಂಜು ಭಾಷಿಣಿ ಹೇಳಿದ್ದಾರೆ.

ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಸಮಾಜ ಸೇವಕಿ ಲಲಿತಾಂಬಾ ಅವರಿಗೆ ಶುಭವಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ವಿಲನ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಿ ಅಲಿಯಾಸ್‌ ಕಾಕ್ರೋಚ್‌ ಈ ಬಾರಿಯ ಬಿಗ್‌ಬಾಸ್‌ ಮನೆಗೆ ಹೋಗುವ ಮೊದಲ ಸ್ಪರ್ಧಿಯಾಗಿದ್ದಾರೆ. ಟಗರು, ಭೀಮ, ಸಲಗ ಸಿನಿಮಾಗಳಲ್ಲಿ ಸುಧಿ ವಿಲನ್‌ ಆಗಿ ನಟಿಸಿದ್ದರು. ಟಗರು ಸಿನಿಮಾದಲ್ಲಿ ಕಾಕ್ರೋಚ್‌ ಪಾತ್ರದಿಂದ ಅವರು ಕಾಕ್ರೋಚ್‌ ಸುಧಿ ಎಂದೇ ಮನೆಮಾತಾಗಿದ್ದಾರೆ. ಈಗಾಗಲೇ ಒಂದೆರಡು ಬಾರಿ ಸುಧಿಗೆ ಬಿಗ್‌ಬಾಸ್‌ ಆಫರ್‌ ಬಂದಿದ್ದರೂ, ಶೂಟಿಂಗ್‌ ಇದ್ದಿದ್ದರಿಂದ ಹೋಗಿರಲಿಲ್ಲ. ಮತ್ತೆ ಕರೆದರೆ ಹೋಗ್ತೀನಿ ಎಂದಿದ್ದರು. ಅದರಂತೆ ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್‌ ಸುಧಿ ಆಯ್ಕೆಯಾಗಿದ್ದಾರೆ.

ಮಾತಿನ ಮಲ್ಲಿ ಎಂದೇ ಫೇಮಸ್‌ ಆಗಿರುವ ಮಲ್ಲಮ್ಮ ದೊಡ್ಮನೆಗೆಎಂಟ್ರಿ – ಇವರ ಹಿನ್ನೆಲೆ ಏನು?

TAGGED:Bigg Boss Grand Opening: Who came? What did they say?
Share This Article
Facebook Twitter Copy Link Print
Previous Article ಅಯ್ಯೋ.. ವೈರಲ್‌ ಹುಡುಗಿಗೆ ಇದೇನಾಯ್ತು?
Next Article Actress’s two children death ಶಾರ್ಟ್ ಸರ್ಕ್ಯೂಟ್: ನಟಿಯ ಇಬ್ಬರು ಮಕ್ಕಳು ಮನೆಯಲ್ಲೇ ಉಸಿರುಗಟ್ಟಿ ಸಾ*ವು

Popular Posts

Attention ಗೃಹಲಕ್ಷ್ಮಿ ದುರ್ಬಳಕೆದಾರರಿಗೆ, ಅನರ್ಹ ಫಲಾನುಭವಿಗಳಿಗೆ ಕಾದಿದೆ ಕಂಟಕ: ಸಿಎಂ ಸೂಚನೆ ಏನು?

2 Min Read

ಪ್ರೇಮಕ್ಕೆ ಧರ್ಮದ ಗಡಿ ಇಲ್ಲವೇ? ಬದಾಯೂನ್‌ನಲ್ಲಿ ಹಿಂದೂ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ; ಗ್ರಾಮದಲ್ಲಿ ಸಂಭ್ರಮ–ಮೌನದ ಎರಡು ಚಿತ್ರಣ

1 Min Read

ಮದುವೆಗೆ ಇನ್ನೂ ಕೆಲವೇ ತಿಂಗಳು ಬಾಕಿ… ಪ್ರೇಯಸಿಯ ಜನ್ಮದಿನ ಸಂಭ್ರಮಕ್ಕೆ ಹೋಗಿದ್ದ ಯುವಕ ದುರ್ಮರಣ

1 Min Read

ಗ್ಯಾಸ್ ಸಿಲಿಂಡರ್ ಲೀಕ್ ಆದಾಗ ಜೀವ ಉಳಿಸೋ ತಂತ್ರಗಳು ಯಾವುದು ಗೊತ್ತಾ?

1 Min Read

You Might Also Like

Sportsಪ್ರಮುಖ

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read
ಕರ್ನಾಟಕಪ್ರಮುಖ

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read
ಪ್ರಮುಖ

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read
ಪ್ರಮುಖ

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?