Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com
ಶಿಶುವಿನ ಬಾಯಿಗೆ ಗಮ್ ಹಾಕಿ ಅಂಟಿಸಿ, ಅಳಬಾರದೆಂದು ಬಾಯೊಳಗೆ ಕಲ್ಲು ಹಾಕಿ ತುಂಬಿ, ಕಾಡಿನಲ್ಲಿ ಎಸೆದು ಹೋಗಿರುವ ರಾಜಸ್ಥಾನದ ಭಿಲ್ವಾರದಲ್ಲಿ ನಡೆದಿದೆ.
ಮಗುವನ್ನು ಕೊಲ್ಲಲು ಅದೆಷ್ಟೇ ಪ್ರಯತ್ನಗಳು ನಡೆದಿದ್ದರೂ, ಅದೃಷ್ಟವಶಾತ್ ಅದು ಬದುಕುಳಿದಿದೆ. ದನ ಕಾಯುವವರೊಬ್ಬರು ಕಾಡಿನಲ್ಲಿ ಮಗುವನ್ನು ನೋಡಿ ಅದರ ಬಾಯಿಯಿಂದ ಕಲ್ಲನ್ನು ಹೊರತೆಗೆದರು. ತಕ್ಷಣ ಅವನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಮಗು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದೆ.
ಭಿಲ್ವಾರದ ಮಂಡಲಗಢ ವಿಧಾನಸಭಾ ಕ್ಷೇತ್ರದ ಬಿಜೋಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ವರದಿಯಾಗಿದೆ.