Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Mysuru Dasara ಸುಪ್ರೀಂನಲ್ಲಿಂದು ಮೈಸೂರು ದಸರಾ ಉದ್ಘಾಟನೆ ವಿವಾದದ ವಿಚಾರಣೆ
ಕರ್ನಾಟಕದೇಶಪ್ರಮುಖ

Mysuru Dasara ಸುಪ್ರೀಂನಲ್ಲಿಂದು ಮೈಸೂರು ದಸರಾ ಉದ್ಘಾಟನೆ ವಿವಾದದ ವಿಚಾರಣೆ

Share
2 Min Read
SHARE

newsics.com

ನವದೆಹಲಿ: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ಪುರಸ್ಕೃತ ವಿಜೇತೆ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಅರ್ಜಿ ವಿಚಾರಣೆಯು ಶುಕ್ರವಾರ ನಡೆಯಲಿದ್ದು ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ.

ಕರ್ನಾಟಕ ಹೈಕೋರ್ಟ್‌ ಈ ಹಿಂದೆ ಮಾಜಿ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಪಿಐಎಲ್‌ಗಳನ್ನು ವಜಾಗೊಳಿಸಿತ್ತು. ಗೌರವ್‌ ಎಂಬ ವಕೀಲರು ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ.

ನಾಡ ಹಬ್ಬ ದಸರಾ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಯನ್ನು ಸರ್ಕಾರ ಆಹ್ವಾನಿಸಿದೆ. ನಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ದಸರಾ ಉದ್ಘಾಟನೆಯನ್ನು ಹಿಂದೂ ಧರ್ಮೀಯರೇ ಉದ್ಘಾಟಿಸಬೇಕು. ಇದು ನಂಬಿಕೆಯ ಪ್ರಶ್ನೆಯಾಗಿದ್ದು ನಾಡ ದೇವತೆ ಒಪ್ಪದೆ ಇರುವವರು ಹಾಗೂ ಸಂಪ್ರದಾಯವನ್ನು ಪಾಲನೆ ಮಾಡದಿರುವವರು ಉದ್ಘಾಟನೆ ಮಾಡುವುದು ಸರಿಯಲ್ಲ. ಹೀಗಾಗಿ ತಕ್ಷಣವೇ ತುರ್ತು ಅರ್ಜಿಯನ್ನು ವಿಚಾರಣೆ ನಡೆಸಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡರು.

ಇದಕ್ಕೆ ಸಮ್ಮತಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಪೀಠ ಶುಕ್ರವಾರ (ಸೆ.19) ಅರ್ಜಿ ವಿಚಾರಣೆ ನಡೆಸುವುದಾಗಿ ಒಪ್ಪಿಗೆ ನೀಡಿತು.

ಪ್ರಸಕ್ತ ವರ್ಷದ ದಸರಾ ಹಬ್ಬ ಉದ್ಘಾಟನೆಗೆ ಬಾನು ಮುಷ್ತಾಕ್‌ ರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಪ್ರತಾಪ್‌ ಸಿಂಹ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಸರ್ಕಾರ ಈ ಆಹ್ವಾನವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಹಾಕಿದ್ದರು. ದಸರಾ ಹಿಂದೂ ಧಾರ್ಮಿಕ ಹಬ್ಬ, ವೇದ, ಮಂತ್ರ, ಧಾರ್ಮಿಕ ಆಚರಣೆಗಳೊಂದಿಗೆ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ಬಾನು ಮುಷ್ತಾಕ್‌ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿರುವುದರಿಂದ ಅವರಿಗೆ ಆಹ್ವಾನ ನೀಡಿರುವುದು ಸಾಂವಿಧಾನಿಕ ಹಕ್ಕುಗಳು ಹಾಗೂ ಧಾರ್ಮಿಕ ಭಾವನೆಗಳ ಉಲ್ಲಂಘನೆಯಾಗಿದ್ದು, ಧಾರ್ಮಿಕ ಸಂಪ್ರದಾಯದ ಪಾವಿತ್ರ್ಯ ಕಾಪಾಡಬೇಕೆಂದು ಮನವಿ ಮಾಡಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಭು ಖಬ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ವಿಭಾಗೀಯ ಪೀಠ, ಅರ್ಜಿ ವಜಾಗೊಳಿಸಿ ಆದೇಶ ನೀಡಿತ್ತು.

ಸರಕಾರ ಜಾತ್ಯತೀತವಾಗಿ ಕಾರ್ಯಕ್ರಮ ನಡೆಸುತ್ತಿದೆ. ಈ ಹಿಂದೆ ನಿಸಾರ್‌ ಅಹದ್‌ ಕೂಡ ಉದ್ಘಾಟಿಸಿದ್ದರು. ವಿರೋಧ ವ್ಯಕ್ತಪಡಿಸಿರುವ ಅರ್ಜಿದಾರರಿಗೆ ದಂಡ ವಿಧಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದ್ದರು.

ಚಾಮುಂಡಿ ತೇರಿಗೆ ನಾನು ಹೋಗಬೇಕೆಂದಿದ್ದೆ ಎಂದು ಸ್ವತಃ ಬಾನು ಮುಷ್ತಾಕ್‌ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ದೇವಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಎಂಬುದನ್ನೂ ಅಡ್ವೊಕೇಟ್‌ ಜನರಲ್‌ ಹೇಳಿದ್ದರು.

https://www.instagram.com/reel/DOu1aWREYt4/?igsh=MWpteTl1ODYxaDd0ag==

ತಮ್ಮ ಹಕ್ಕು ಯಾವುದಾದರೂ ಉಲ್ಲಂಘನೆಯಾಗಿದೆಯೇ ಎಂದು ಅರ್ಜಿದಾರರಾದ ಪ್ರತಾಪ್‌ ಸಿಂಹ ಅವರನ್ನು ಕೋರ್ಟ್‌ ಪ್ರಶ್ನಿಸಿತ್ತು. ಹೀಗಾಗಿ ಸುಮನೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿ, ಅರ್ಜಿದಾರರ ವಿರುದ್ಧ ದಂಡ ಹಾಕುವುದಕ್ಕೆ ಹೈಕೋರ್ಟ್‌ ನಿರಾಕರಿಸಿತ್ತು.

Bigg Boss ಬಿಗ್ ಬಾಸ್ ಕನ್ನಡ ಸೀಸನ್ 12′ ಶೋಗೆ ಫೈನಲ್ ಆದ ಸ್ಪರ್ಧಿಗಳು ಇವರೇ ನೋಡಿ?

TAGGED:Mysore Dasara inauguration controversy to be heard in Supreme Court today
Share This Article
Facebook Twitter Copy Link Print
Previous Article ಶೃಂಗೇರಿ‌ ಲಾಡ್ಜ್‌ನಲ್ಲಿ ಹಿಂದು‌ ಮಹಿಳೆ ಜತೆ ಅನ್ಯ ಕೋಮಿನ ವ್ಯಕ್ತಿ ರೊಮ್ಯಾನ್ಸ್: ಇಬ್ಬರೂ ಈಗ ಪೊಲೀಸ್ ಅತಿಥಿ!
Next Article ಸೆ. 22ರಿಂದ ಮೊಸರು, ತುಪ್ಪ, ಬೆಣ್ಣೆ ಸೇರಿ ನಂದಿನಿ ಉತ್ಪನ್ನಗಳ ದರ ಇಳಿಕೆ

Popular Posts

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read

You Might Also Like

ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ದೇಶಪ್ರಮುಖ

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read
ಕರ್ನಾಟಕಪ್ರಮುಖ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?