newsics.com
ಬೀಜಿಂಗ್ : ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಫ್ಲೈಯಿಂಗ್ ಕಾರು ಪ್ರಯೋಗ ವೇಳೆ ಎರಡು ಫ್ಲೈಯಿಂಗ್ ಕಾರುಗಳು ಆಗಸದಲ್ಲಿ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ನೆಲಕ್ಕಪ್ಪಳಿಸಿರುವ ಘಟನೆ ಚೀನಾದ ಚಾನ್‌ಚುಂಗ್ ಏರ್‌ಶೋದಲ್ಲಿ ನಡೆದಿದೆ. ಈ ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ.
ಕೆಲ ದೇಶಗಳಲ್ಲಿ ಈಗಾಗಲೇ ಫ್ಲೈಯಿಂಗ್ ಕಾರುಗಳು ಸೇವೆ ಆರಂಭಿಸಿದೆ. ಇದೇ ಮೊದಲ ಬಾರಿಗೆ ಫ್ಲೈಯಿಂಗ್ ಕಾರು ಅಪಘಾತ ವರದಿಯಾಗಿದೆ. ಏರ್ ಶೋ ವೀಕ್ಷಿಸಲು ಸಾವಿರಾರು ಜನರು ಸೇರಿದ್ದರು. ಹೀಗಾಗಿ ನಿಗಿಧಿತ ಸ್ಥಳದಲ್ಲೇ ಫ್ಲೈಯಿಂಗ್ ಕಾರು ಪ್ರದರ್ಶನ ನೀಡಬೇಕಿತ್ತು. ಸ್ಥಳದ ಕೊರತೆಯಿಂದ ಆಗಸದಲ್ಲಿ ಫ್ಲೈಯಿಂಗ್ ಕಾರು ಅಪಘಾತಕ್ಕೀಡಾಗಿದೆ.
ಫ್ಲೈಯಿಂಗ್ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲ ನಿಮಿಷಗಳಲ್ಲೇ ಫ್ಲೈಯಿಂಗ್ ಕಾರು ನೆಲಕ್ಕೆ ಅಪ್ಪಳಿಸಿದೆ. ಸ್ಥಳದಲ್ಲಿ ಅಗ್ನಿಶಾಮಕ ದಳಿ ಹಾಗೂ ಆ್ಯಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.