Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress Tanushree ಅಲ್ಲಿಗೆ ಹೋಗಿ ನಾನೇಕೆ ಪರಪುರುಷನ ಜತೆ ಮಲಗ್ಲಿ… ನಟಿ ತನುಶ್ರೀ ಹೀಗೆ ಹೇಳಿದ್ಯಾಕೆ?
ದೇಶಪ್ರಮುಖಮನರಂಜನೆ

Actress Tanushree ಅಲ್ಲಿಗೆ ಹೋಗಿ ನಾನೇಕೆ ಪರಪುರುಷನ ಜತೆ ಮಲಗ್ಲಿ… ನಟಿ ತನುಶ್ರೀ ಹೀಗೆ ಹೇಳಿದ್ಯಾಕೆ?

Share
2 Min Read
SHARE

newsics.com

ನವದೆಹಲಿ: ಕನ್ನಡ , ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈಗಾಗಲೇ ಬಿಗ್ ಬಾಸ್ ದೊಡ್ಡ ಮಟ್ಟಿಗೆ ಸಕ್ಸಸ್ ಪಡೆದಿದೆ.

ಕಾಂಟ್ರವರ್ಸಿ ಮಾಡಿರುವ ಸೆಲೆಬ್ರಿಟಿ ಸ್ಟಾರ್ ಗಳಿಂದ ಹಿಡಿದು ಸೋಶಿಯಲ್ ಮಿಡಿಯಾದಲ್ಲಿ ಜನಪ್ರಿಯರಾಗಿರುವವರು, ಟಿವಿ ವಾಹಿನಿಯಲ್ಲಿ ಕೆಲಸ ಮಾಡುವವರು ಹೀಗೆ ನಾನಾ ವೃತ್ತಿಗಳಿಂದ ಸಮಾಜದಲ್ಲಿ ಖ್ಯಾತಿ ಪಡೆದವರು ಎಲ್ಲರಿಗೂ ಬಿಗ್ ಬಾಸ್ ಮನೆ ಒಂದೊಳ್ಳೆ ವೇದಿಕೆ ಕಲ್ಪಿಸಿದೆ‌.

ಬಿಗ್ ಬಾಸ್ ನಿಂದ ಖ್ಯಾತಿ ಪಡೆಯಬಹುದು ಎನ್ನುವ ಉದ್ದೇಶಕ್ಕೆ ಅನೇಕರು ಈ ಬಿಗ್ ಬಾಸ್ ಆಫರ್ ಬಂದ ಕೂಡಲೇ ಒಪ್ಪಿಬಿಡುತ್ತಾರೆ. ಆದರೆ ಇನ್ನು ಕೆಲವರು ಇಂತಹ ಆಫರ್ ಎಷ್ಟೇ ಬರಲಿ ಎಷ್ಟೇ ಹಣವನ್ನು ನೀಡಿದ್ರೂ ರಿಜೆಕ್ಟ್ ಮಾಡುವವರು ಇದ್ದಾರೆ.

ಬಾಲಿವುಡ್ ನಟಿ ತನುಶ್ರೀ ದತ್ತಾ ಕೂಡ ಈಗ ಈ ಸಾಲಿನಲ್ಲಿದ್ದಾರೆ. ಕೋಟಿ ಕೊಟ್ಟರೂ ಬಿಗ್‌ಬಾಸ್‌ಗೆ ಬರಲ್ಲ ಎಂದಿದ್ದಾರೆ.

ಆಶಿಕ್ ಬನಾಯಾ ಆಪ್ನೇ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದ ನಟಿ ತನುಶ್ರೀ ದತ್ತಾ ಅವರು ಸಿನಿಮಾಕ್ಕಿಂತಲೂ ಗಾಸಿಪ್ ಹಾಗೂ ಕಾಂಟ್ರವರ್ಸಿ ವಿಚಾರದಿಂದಲೇ ಬಹಳ ಖ್ಯಾತಿ ಪಡೆದಿದ್ದಾರೆ.

ಮೀಟೂ ಅಭಿಯಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ನಟಿ ತನುಶ್ರೀ ಅವರಿಗೂ ಕೂಡ ಹಿಂದಿ ಬಿಗ್ ಬಾಸ್ ಶೋಗೆ ಸ್ಪರ್ಧಿಯಾಗಿ ಬರಲು ಆಹ್ವಾನವಿತ್ತಂತೆ. ಈ ಶೋಗೆ ಬರಲು ಅವರಿಗೆ ಕೋಟಿ ಹಣದ ಆಫರ್ ಸಹ ನೀಡಲಾಗಿತ್ತು. ಆದರೆ ಅವರು ಅವೆಲ್ಲವನ್ನೂ ನಿರಾಕರಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬರಲು ತನುಶ್ರೀಗೆ ಆಯೋಜಕರು 1.65ಕೋಟಿ ರೂ. ಹಣದ ಆಮಿಷವನ್ನು ನೀಡಿದ್ದರು. ಆದರೆ ತನುಶ್ರೀ ಮಾತ್ರ ಈ ಆಫರ್ ಒಪ್ಪಲೇ ಇಲ್ಲ. ಈ ಬಗ್ಗೆ ಇತ್ತೀಚಿನ ಸಂದರ್ಶನ ಒಂದರಲ್ಲಿ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರತಿ ವರ್ಷವೂ ಬಿಗ್ ಬಾಸ್‌ ಕಡೆಯಿಂದ ನನಗೆ ಕರೆ ಬರುತ್ತಿದೆ. ಈ ವರ್ಷ ಕೂಡ ನನಗೆ ಕರೆ ಮಾಡಿ 1.65ಕೋಟಿಯ ಆಫರ್ ಕೂಡ ನೀಡಿದ್ದರು. ಆದರೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಯಾವತ್ತೂ ಹೋಗುವುದಿಲ್ಲ ಎಂದಿದ್ದಾರೆ.

ನಾನು ನನ್ನ ಕುಟುಂಬದವರ ಜತೆಯಲ್ಲಿಯೇ ವಾಸ ಮಾಡಲು ಇಷ್ಟ ಪಡಲಾರೆ‌. ಅಂದ ಮೇಲೆ ಪರಿಚಯ ಇಲ್ಲದ ವ್ಯಕ್ತಿಗಳ ಜತೆ ಆ ಮನೆಯಲ್ಲಿ ಹೇಗೆ ಇರಲು ಸಾಧ್ಯ. ಅಲ್ಲಿ ಎಲ್ಲರೂ ಒಟ್ಟಿಗೇ ಇರುತ್ತಾರೆ. ಜಗಳ ಮಾಡ್ತಾರೆ. ಕಣ್ಣೀರು ಹಾಕ್ತಾರೆ. ಪರಸ್ಪರ ಬೈಯುತ್ತಾರೆ. ಹಿಂದಿನಿಂದ ದೂರುತ್ತಾರೆ. ಅಷ್ಟೇ ಅಲ್ಲ, ಆ ಮನೆಯಲ್ಲಿ ಹುಡುಗ-ಹುಡುಗಿ ಹಾಸಿಗೆಯನ್ನು ಕೂಡ ಹಂಚಿಕೊಳ್ಳುತ್ತಾರೆ. ಟಿಆರ್‌ಪಿಗಾಗಿ ನಾನು ಒಂದೇ ಹಾಸಿಗೆಯಲ್ಲಿ ಪರ ಪುರುಷನ ಜತೆ ಮಲಗಬೇಕಾ? ನಾನು ಅಷ್ಟೊಂದು ಚೀಪ್ ಅಲ್ಲ, ಬರಗೆಟ್ಟು ಕುಳಿತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಟಿ ತನುಶ್ರೀ ಅವರು 2018ರ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಮಾಡಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಮೀಟೂ ಅಭಿಯಾನಕ್ಕೆ ದೊಡ್ಡ ಹೆಜ್ಜೆ ಕೂಡ ಆಗಿತ್ತು. ಸಿನಿಮಾದ ಹಾಡೊಂದರ ಚಿತ್ರೀಕರಣ ಸಮಯದಲ್ಲಿ ನಟ ನಾನಾ ಪಾಟೇಕರ್ ಅವರು ತನ್ನ ಜತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಆರೋಪಿಸಿದ್ದರು‌. ಇದಾದ ಬಳಿಕ ಅವರ ಸಿನಿಮಾ ಆಫರ್ ಬರುವ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ.

TAGGED:Actress Tanushree rejects Bigg Boss offer
Share This Article
Facebook Twitter Copy Link Print
Previous Article Dharmasthala Case ಧರ್ಮಸ್ಥಳ ಕೇಸ್ ಗೆ ಟ್ವಿಸ್ಟ್ : ಬಂಗ್ಲೆಗುಡ್ಡದಲ್ಲಿ ಶೋಧ, 113 ಮೂಳೆಗಳು ಪತ್ತೆ.!
Next Article ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಕಮೀಷನರ್ ಗೆ ದೂರು

Popular Posts

ಎರಡನೆ ಹಂತದ ಸಂಪುಟ ವಿಸ್ತರಣೆ : ಹೊಸ ಮುಖಗಳಿಗೆ ಸಿಗುತ್ತಾ ಈ ಬಾರಿ ಆದ್ಯತೆ

1 Min Read

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

You Might Also Like

ಕರ್ನಾಟಕಪ್ರಮುಖ

ಸಾಗರದಲ್ಲಿ ಪೆಟ್ರೋಲ್ ಕದಿಯೋ ಗ್ಯಾಂಗ್: ಬಸ್, ರೈಲ್ವೆ ನಿಲ್ದಾಣದ ಬೈಕ್ ಗಳೇ ಕಳ್ಳರ ಟಾರ್ಗೆಟ್!

1 Min Read
ದೇಶಪ್ರಮುಖವಿದೇಶ

ಎಲೋನ್ ಮಸ್ಕ್ ಒಡೆತನದ SpaceX ಮತ್ತು Starlink ಟಾರ್ಗೆಟ್ ಎಂದ ಇರಾನ್!

1 Min Read
ದೇಶಪ್ರಮುಖ

ಸೊಸೆ ಮೇಲೆ ಮಾವನಿಂದಲೇ ಪದೇ ಪದೇ ಅತ್ಯಾಚಾರ: ಫೋನ್ ನಲ್ಲೇ ತ್ರಿವಳಿ ತಲಾಖ್ ನೀಡಿದ ಪತಿ

2 Min Read
ಕರ್ನಾಟಕಪ್ರಮುಖ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಪ್ರಕ್ರಿಯೆಗೆ ಚಾಲನೆ : ಬಾಯ್ಸ್​​​​ ನಿಮಗೂ ಉಚಿತ ಪ್ರಯಾಣ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?