newsics.com
ಬೆಂಗಳೂರಲ್ಲಿ ರಾತ್ರಿ ಸುರಿದ ಮಳೆಗೆ ಇಡೀ ನಗರ ಅಸ್ತವ್ಯಸ್ತಗೊಂಡಿದ್ದು, ಇನ್ನು ರಾಜಾಜಿನಗರ 4ನೇ ಬ್ಲಾಕ್ನಲ್ಲಿ ಬಹೃತ್ ಮರವೊಂದು ನೆಲಕ್ಕೆ ಬಿದ್ದಿದೆ. ಪರಿಣಾಮ ಐದು ಕಾರು, ಟಾಟಾ ಏಸ್, ಮೂರ್ನಾಲ್ಕು ಬೈಕ್ ಹಾಗೂ ಎರಡು ಮನೆಯ ಕಾಂಪೌಂಡ್ ಮೇಲೆ ಮರ ಬಿದ್ದಿದೆ.
ಮನೆ ಮುಂದೆ ನಿಲ್ಲಿಸಿದ್ದ ನೆಂಟರ ಕಾರು ಫುಲ್ ಜಖಂಗೊಂಡಿದೆ. ಮರ ಬಿದ್ದು ಹೊರಬರಲಾಗದೇ ಹೌಸ್ ಅರೆಸ್ಟ್ ಆಗಿದ್ದೀವಿ ಎಂದು ಕುಟುಂಬ ಗೋಳಾಡಿದೆ. ಮತ್ತೊಂದು ಕಡೆ ಆತಂಕದ ವಿಚಾರ ಅಂದ್ರೆ, ವಿದ್ಯುತ್ ಕಂಬಗಳು ವಾಲಿದೆ. ಯಾವುದೇ ಕ್ಷಣದಲ್ಲಾದರೂ ಅದು ಕೂಡ ಅಪಾಯ ತರುವ ಸೂಚನೆ ನೀಡ್ತಿದೆ.
ಶಾಂತಿನಗರ, ಲಾಲ್ ಬಾಗ್, ವಿಲ್ಸನ್ ಗಾರ್ಡನ್, ಜಯನಗರ, ಎಂ.ಜಿ ರೋಡ್, ಟ್ರಿನಿಟಿ ಸರ್ಕಲ್, ಆಶ್ರಮ, ಶ್ರೀನಿವಾಸನಗರ, ಹನುಮಂತನಗರ, ಕತ್ರಿಗುಪ್ಪೆ, ವಿದ್ಯಾಪೀಠ, ಮೆಜೆಸ್ಟಿಕ್, ಯಶವಂತಪುರ ಸೇರಿ ಹಲವೆಡೆ ಮಳೆಯಾಗಿದೆ.