ಅಮೆರಿಕದಿಂದಲೇ ಮುಧೋಳದ ಮನೆಯಲ್ಲಿ ಕಳ್ಳತನ ತಪ್ಪಿಸಿದ ಟೆಕ್ಕಿ! ಏನ್ಮಾಡಿದ್ರು ಶೃತಿ?

newsics.com ಕರ್ನಾಟಕದ ಟೆಕ್ಕಿ ಯುವತಿಯೊಬ್ಬರು ಅಮೆರಿಕದಲ್ಲಿ ಕುಳಿತೇ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿ ಜಾಣ್ಮೆ ಮೆರೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ಪಟ್ಟಣದ ಸಿದ್ರಾಮೇಶ್ವರ ಕಾಲೊನಿಯಲ್ಲಿ ನೆಲೆಸಿರುವ ನಿವೃತ್ತ ಎಂಜಿನಿಯರ್‌ ಹನಮಂತಗೌಡ ಅವರ ಪುತ್ರಿ ಶೃತಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ವಿದೇಶದಲ್ಲಿದ್ದರೂ ಸಮಯಪ್ರಜ್ಞೆ ಮೆರೆದು ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸುವಲ್ಲಿ ಶೃತಿ ಯಶಸ್ವಿಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಊರಿಗೆ ಆಗಮಿಸಿದ್ದಾಗ ಶೃತಿ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಅಳವಡಿಸಿದ್ದು ಮಾತ್ರವಲ್ಲ ಅದರ ದೃಶ್ಯ ತನ್ನ ಮೊಬೈಲಿಗೆ ಬರುವಂತೆ ಮಾಡಿಕೊಂಡಿದ್ದರು. … Continue reading ಅಮೆರಿಕದಿಂದಲೇ ಮುಧೋಳದ ಮನೆಯಲ್ಲಿ ಕಳ್ಳತನ ತಪ್ಪಿಸಿದ ಟೆಕ್ಕಿ! ಏನ್ಮಾಡಿದ್ರು ಶೃತಿ?