newsics.com
ನವದೆಹಲಿ: ಗಗನಯಾನಿ ಶುಭಾಂಶು ಶುಕ್ಲಾ ಭಾರತಕ್ಕೆ ಮರಳಿದ್ದು, ದೆಹಲಿಗೆ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ.
ಆಕ್ಸಿಯಮ್ -4 ಕಾರ್ಯಾಚರಣೆಯ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ(ಐಎಸ್‌ಎಸ್) ಐತಿಹಾಸಿಕ ಭೇಟಿ ನೀಡಿದ ನಂತರ ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತಕ್ಕೆ ಮರಳಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.
ಜುಲೈ 15 ರಂದು ಭೂಮಿಗೆ ಮರಳಿರುವ ಶುಕ್ಲಾ ಭಾನುವಾರ ಮುಂಜಾನೆ ದೆಹಲಿಗೆ ಬಂದಿಳಿದರು.
ಅವರನ್ನು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಅವರ ಪತ್ನಿ ಮತ್ತು ಮಗ ಸೇರಿದಂತೆ ಅವರ ಕುಟುಂಬ ಬರಮಾಡಿಕೊಂಡಿದೆ.