newsics.com
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಆರೋಪಿಗಳು ಮತ್ತೆ ಜೈಲಿಗೆ ಹೋಗಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ನಿನ್ನೆ ಹೋಗಿದ್ದರು. ಇದರ ಬೆನ್ನಲ್ಲೇ ಇಂದು ದರ್ಶನ್ ಸೇರಿ ಉಳಿದ ಆರೋಪಿಗಳಿಗೆ ಕೈದಿ ನಂಬರ್ ಅನ್ನು ನೀಡಲಾಗಿದೆ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ 7313, ಎ2 ಆರೋಪಿ ದರ್ಶನ್ ಅವರಿಗೆ 7314 ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
ಎ11 ಆರೋಪಿ ಆರ್. ನಾಗರಾಜ್ 7315, ಎ12 ಆರೋಪಿ ಎಂ. ಲಕ್ಷ್ಮಣ್ ಗೆ 7316, ಪ್ರದೋಶ್ ಅವರಿಗೆ 7317 ವಿಚಾರಣಾ ಕೈದಿ ಸಂಖ್ಯೆ ನೀಡಲಾಗಿದೆ. ಇದೇ ಪ್ರಕರಣದಲ್ಲಿ ಕಳೆದ ವರ್ಷ ಜೂನ್ ನಲ್ಲಿ ಬಂಧಿಸಿದ ಸಂದರ್ಭದಲ್ಲಿ ದರ್ಶನ್ ಗೆ ಕೈದಿ ಸಂಖ್ಯೆ 6106 ನೀಡಲಾಗಿತ್ತು. ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾದ ಬಳಿಕ ಕೈದಿ ಸಂಖ್ಯೆ 511 ನೀಡಲಾಗಿತ್ತು.