Uttaradi Matha waterlogged ಕಲಬುರಗಿಯಲ್ಲಿ ಭಾರೀ ಮಳೆ: ಉತ್ತರಾದಿಮಠ ಜಲಾವೃತ, ನಿಲ್ಲದ‌ ಪೂಜೆ, ವಿಡಿಯೋ ನೋಡಿ

newsics.com ಕಲಬುರಗಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಿಲ್ಲೆಯ ಸೇಡಂ ತಾಲೂಕಿನ ಜಯತೀರ್ಥರ ಮೂಲವೃಂದಾವನ ಮಾನ್ಯಖೇಡ್‌ನ ಉತ್ತರಾದಿ ಮಠ ಸಂಪೂರ್ಣ ಜಲಾವೃತಗೊಂಡಿದೆ. ಜಿಲ್ಲೆಯಾದ್ಯಂತ ಬುಧವಾರ ತಡರಾತ್ರಿ ನಿರಂತರ ಸುರಿದ ಮಳೆಯಿಂದಾಗಿ ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿಯ ನೀರು ಉತ್ತರಾದಿ ಮಠಕ್ಕೆ ನುಗ್ಗಿದ ಪರಿಣಾಮವಾಗಿ ಕಾಗಿಣಾ ತಟದಲ್ಲಿನ ಜಯತೀರ್ಥರ ಮೂಲ ವೃಂದಾವನ ಸಂಪೂರ್ಣ ಜಲಾವೃತವಾಗಿದೆ. ಉತ್ತರಾದಿ ಮಠ ಸಂಪೂರ್ಣ ಜಲಾವೃತಗೊಂಡಿದ್ದರೂ ನೀರಿನಲ್ಲೇ ನಿಂತು ಮಠದ ಅರ್ಚಕರು ದಿನನಿತ್ಯದಂತೆ ಪೂಜಾ ಕೈಂಕರ್ಯ ನೇರವೇರಿಸಿದ್ದಾರೆ. ರಾಜ್ಯದ … Continue reading Uttaradi Matha waterlogged ಕಲಬುರಗಿಯಲ್ಲಿ ಭಾರೀ ಮಳೆ: ಉತ್ತರಾದಿಮಠ ಜಲಾವೃತ, ನಿಲ್ಲದ‌ ಪೂಜೆ, ವಿಡಿಯೋ ನೋಡಿ