newsics.com
ಗೊಂಡ: ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಅವರ ಪ್ರತಿನಿಧಿ ರಾಜೇಶ್ ಸಿಂಗ್ ಮತ್ತು ಇತರ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ. .
ಮಂಕಾಪುರದ ಪ್ರದೇಶದ ಭಿತೌರ್ ನಿವಾಸಿ ಅಜಯ್ ಸಿಂಗ್ ಎಂಬುವವರು ತಮ್ಮ ಪತ್ನಿ ಮನಿಷಾ ಸಿಂಗ್ ಹೆಸರಿನಲ್ಲಿ ನೊಂದಾಯಿಸಲಾಗಿದ್ದ ಭೂಮಿಯನ್ನು ಮೂಲ ಮಾರಾಟಗಾರರಾದ ಬಿಟ್ಟನ್ ದೇವಿ ಎಂಬುವವರ ಮೇಲೆ ಪ್ರಭಾವಿ ಬೀರಿ ಮೂರು ವರ್ಷದ ಹಳೇ ಸ್ಟಾಂಪ್ ಪೇಪರ್ ಬಳಸಿ ಮಿಥಲೇಶ್ ರಸ್ತೋಗಿ ಹಾಗೂ ಕಾಂತಿ ಸಿಂಗ್ ಅವರ ಹೆಸರಿಗೆ ವರ್ಗಾಯಿಸುವ ಮೂಲಕ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ತನಿಖೆ ನಡೆಸಿದ ಪೊಲೀಸರಿಗೆ ಆರೋಪ ದೃಧಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.