newsics.com
ನವದೆಹಲಿ : 2013ರ ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಕ್ಕಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಎರಡು ಪ್ರಮುಖ ಮಾಧ್ಯಮ ಚಾನೆಲ್’ಗಳು ಮತ್ತು ಪತ್ರಕರ್ತರ ವಿರುದ್ಧ ಹೂಡಿದ್ದ 100 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಸಿ.ವಿ. ಕಾರ್ತಿಕೇಯನ್ ಅವರು ಧೋನಿ ಪರವಾಗಿ ಸಾಕ್ಷ್ಯಗಳನ್ನ ದಾಖಲಿಸಲು ವಕೀಲ ಆಯುಕ್ತರನ್ನ ನೇಮಿಸಿದ್ದಾರೆ.
2014ರಲ್ಲಿ ಧೋನಿ ಅವರು ಪ್ರತಿವಾದಿಗಳಿಂದ 100 ಕೋಟಿ ರೂ. ಪರಿಹಾರ ಕೋರಿ ಪ್ರಕರಣ ದಾಖಲಿಸಿದ್ದರು. L
https://www.newsics.com/2025/08/12/husband-kills-wife-with-childhood-friend/