Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮೈಸೂರಿಗೆ ಬಂತು ದಸರಾ ಗಜಪಡೆ… ಈ ಬಾರಿ ಯಾರಿಗೆ ಸಿಕ್ತು ಅರ್ಜುನ ಪ್ರಶಸ್ತಿ?
ದೇಶಕರ್ನಾಟಕಪ್ರಮುಖ

ಮೈಸೂರಿಗೆ ಬಂತು ದಸರಾ ಗಜಪಡೆ… ಈ ಬಾರಿ ಯಾರಿಗೆ ಸಿಕ್ತು ಅರ್ಜುನ ಪ್ರಶಸ್ತಿ?

Share
2 Min Read
SHARE

newsics.com

ಮೈಸೂರು: ಈ ಬಾರಿ ವಿಜೃಂಣೆಯಿಂದ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ಮುನ್ನುಡಿಯಾದ ಗಜಪಯಣ ಸೋಮವಾರ ನಡೆಯಿತು.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಅರಣ್ಯಸಚಿವ ಈಶ್ವರ ಖಚಿಡ್ರೆ ಅವರು ಗಜಪಡೆಗೆ ಸಾಂಪ್ರದಾಯಿಕ ಪ್ರಜೆಯನ್ನು ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಿದರು. ಚಾಲನೆ ನೀಡಬೇಕಾಗಿದ್ದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಕಾರ್ಯಕ್ರಮಕ್ಕೆ ಬರಲಿಲ್ಲ. ಹಾಗಾಗಿ ಸಚಿವ ಈಶ್ವರ ಖಂಡ್ರೆಯವರೇ ಚಾಲನೆ ನೀಡಿದರು.

ಸಾಂಪ್ರದಾಯಿಕ ಪೂಜೆ: ಗಜಪಯಣಕ್ಕೂ ಮುನ್ನ ಮೈಸೂರು ಅರಮನೆಯ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ ೯ ಆನೆಗಳಿಗೆ ಸಾಂಪ್ರದಾಯಿಕವಾಗಿ ಪಾದ ತೊಳೆದು, ಅರಿಶಿನ ಕುಂಕುಮ ಹಚ್ಚಿ, ಶೃಂಗಾರ ಮಾಡಿ ವಿವಿ‘ ಬಗೆಯ ತಿಂಡಿ, ತಿನಿಸುಗಳನ್ನು ಇಟ್ಟು ಪ್ರಜೆ ಸಲ್ಲಿಸಲಾಯಿತು. ಕಾಡಿನ ದೇವತೆಗೆ ಪೂಜೆ, ಗಣಪತಿ ಪೂಜೆ, ಚಾಮುಂಡೇಶ್ವರಿ ಪೂಜೆ ಮಾಡಿ, ಮಹಾ ಮಂಗಳಾರತಿ ಮಾಡಿದ ನಂತರ ಮ‘್ಯಾಹ್ನ ೧೨:೩೪ ರಿಂದ ೧೨:೫೯ರ ಶು‘ ತುಲಾ ಲಗ್ನದಲ್ಲಿ ಸ್ಥಳದಲ್ಲಿದ್ದ ಗಣ್ಯರಿಂದ ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ಸಿಕ್ಕಿತು.

ಪೂಜೆಯ ನಂತರ ಗಜಪಡೆಗೆ ಕಬ್ಬು, ಬೆಲ್ಲ, ಬಾಳೆಹಣ್ಣು, ಕಾಯಿ ಹಾಗೂ ಇತರ ಹಣ್ಣುಹಂಪಲುಗಳನ್ನು ನೀಡಲಾಯಿತು ಹಾಗೂ ಗಜಪಡೆಗೆ ಅರ್ಚಕರು ದೃಷ್ಟಿ ತೆಗೆದರು. ಈ ಗಜಪಯಣ ಕಾರ್ಯಕ್ರಮದಲ್ಲಿ ವಿವಿ‘ ಜಾನಪದ ತಂಡಗಳು, ವೀರಗಾಸೆ, ಬುಡಕಟ್ಟು ಜಾನಪದ ಕಲೆ ಸೇರಿದಂತೆ ವಿವಿ‘ ಕಾರ್ಯಕ್ರಮಗಳು ನೆರವೇರಿದವು.

ಅರ್ಜುನ ಪ್ರಶಸ್ತಿ ಪ್ರದಾನ:

ವೇದಿಕೆ ಕಾರ್ಯಕ್ರಮದಲ್ಲಿ ಆನೆ ಸೆರೆ ಕಾರ್ಯಾಚರಣೆ, ಆನೆಗಳನ್ನು ಪಳಗಿಸುವುದು ಮತ್ತು ಯಶಸ್ವಿಯಾಗಿ ವನ್ಯಜೀವಿ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಉತ್ತಮ ಕಾರ್ಯ ಮಾಡಿದ ಮಾವುತರು, ಕಾವಾಡಿ ಹಾಗೂ ಅರಣ್ಯ ಸಿಬ್ಬಂದಿಗೆ ಇನ್ನು ಮುಂದೆ ಅರ್ಜುನ ಆನೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಇದರ ಮೊದಲ ಸಾಲಿನ ಪ್ರಶಸ್ತಿಯನ್ನು ಭೀಮ ಆನೆಯ ಮಾವುತ ಹಾಗೂ ಕಾವಾಡಿಗಳಾದ ಗುಂಡ ಮತ್ತು ನಂಜುಂಡಸ್ವಾಮಿಯವರಿಗೆ ಅರಣ್ಯ ಸಚಿವ ಈಶ್ವರ ಖಚಿಡ್ರೆ ಅವರು ವೇದಿಕೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಈ ಪ್ರಶಸ್ತಿ ತಲಾ ೧೦೦೦೦ ರೂ. ಗೌರವ‘ನ ಹಾಗೂ ಪ್ರಶಂಸಾ ಪತ್ರ ಒಳಗೊಂಡಿದೆ. ಇನ್ನು ಮುಂದೆ ಸಮಿತಿ ಒಂದನ್ನು ರಚಿಸಿ ಅರ್ಹ ಸಾ‘ಕರನ್ನ ಈ ಪ್ರಶಸ್ತಿಗೆ ಪ್ರತಿವರ್ಷ ಆಯ್ಕೆ ಮಾಡಲಾಗುವುದು, ಗಜ ಪಯಣದ ದಿನ ಪ್ರಶಸ್ತಿ ಪ್ರದಾನ ನೆರವೇರಲಿದೆ ಎಂದು ಸಚಿವರು ತಿಳಿಸಿದರು.

ಮೈಸೂರಿಗೆ ಬಂದ ಗಜಪಡೆ ಅರಣ್ಯ ‘ವನದಲ್ಲಿ ವಾಸ್ತವ್ಯ: ಗಜಪಯಣಕ್ಕೆ ಚಾಲನೆ ಸಿಕ್ಕ ಬಳಿಕ, ಕ್ಯಾಪ್ಟನ್ ಅಭಿಮನ್ಯು(೫೯), ಮತ್ತಿಗೋಡು ಶಿಬಿರದ ಭೀಮ(೨೫), ದುಬಾರೆ ಶಿಬಿರದ ಕಂಜನ್ (೨೪), ‘ನಂಜಯ (೪೪) ಮತ್ತು ಪ್ರಶಾಂತ್ (೫೩), ಬಳ್ಳೆ ಶಿಬಿರದ ಮಹೇಂದ್ರ (೪೨), ದೊಡ್ಡಹರವೆ ಶಿಬಿರದ ಏಕಲವ್ಯ (೪೦) ಸೇರಿದಂತೆ ೭ ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (೪೫) ಹಾಗೂ ಬಳ್ಳೆಯ (ದೊಡ್ಡಹರವೆ) ಲಕ್ಷ್ಮೀ (೫೩) ಹೆಣ್ಣಾನೆಗಳನ್ನು ಪ್ರತ್ಯೇಕವಾಗಿ ಲಾರಿಗಳಲ್ಲಿ ಮೈಸೂರಿನ ಅರಣ್ಯ ‘ವನಕ್ಕೆ ಕರೆತಂದು ಇಳಿಸಲಾಯಿತು. ಅಲ್ಲಿ ಆನೆಗಳು ತಮ್ಮ ಮಾವುತರು, ಕಾವಾಡಿಗಳೊಂದಿಗೆ ವಾಸ್ತವ್ಯ ಹೂಡಿದವು. ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಬಂದಿರುವ ಅವು, ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನ ನಡೆಸುತ್ತಿವೆ.

ಅರಮನೆಗೆ ಗಜಪಡೆ ಎಂಟ್ರಿ:

ಮೈಸೂರು ಅರಮನೆ ಮಂಡಳಿ, ಜಿಲ್ಲಾಡಳಿತದಿಂದ ಸಾಂಪ್ರದಾಯಿಕ ಪ್ರಜೆಯನ್ನು ಸಲ್ಲಿಸುವ ಮೂಲಕ ಗಜಪಡೆಯನ್ನು ಸ್ವಾಗತಿಸಲಾಗುತ್ತದೆ. ಬಳಿಕ ಅರಮನೆಯ ಆವರಣದಲ್ಲಿ ತಮಗಾಗಿ ನಿರ್ಮಿಸಿರುವ ಶೆಡ್‌ಗಳಲ್ಲಿ ವಾಸ್ತವ್ಯ ಹೂಡಲಿವೆ.

 

https://www.newsics.com/2025/08/04/neha-murder-case-court-rejects-bail-plea-of-accused-fayaz/

TAGGED:#world #famous #Mysore #Dasara #Gajapayana
Share This Article
Facebook Twitter Copy Link Print
Previous Article Neha murder case ನೇಹಾ ಹತ್ಯೆ ಕೇಸ್ -ಆರೋಪಿ ಫಯಾಜ್ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ
Next Article Viral ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಿದ ಸ್ನೇಹಿತ – ವೈರಲ್ ವಿಡಿಯೋ ನೋಡಿ

Popular Posts

India – Zimbabwe Cricket Match ಇಂದಿನಿಂದ ಭಾರತ-ಜಿಂಬಾಬ್ವೆ ಟಿ20 ಸರಣಿ ಆರಂಭ

2 Min Read

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Devegowda grand daughter video viral |ಮರಿ ಮೊಮ್ಮಗಳೊಂದಿಗೆ ಆಟವಾಡಿದ ದೇವೇಗೌಡ-ಚೆನ್ನಮ್ಮ ದಂಪತಿಯ ಭಾವನಾತ್ಮಕ ವಿಡಿಯೋ ವೈರಲ್

2 Min Read

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read

You Might Also Like

ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
Crimeದೇಶ

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read
ಕರ್ನಾಟಕ

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?