newsics.com
ಯಾದಗಿರಿ: ಮಕ್ಕಳನ್ನ ಅಂಗನವಾಡಿ ಕೇಂದ್ರದಲ್ಲಿ ಲಾಕ್ ಮಾಡಿ ಅಂಗನವಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿಯ ಬುದೂರ್ ಗ್ರಾಮದಲ್ಲಿ ನಡೆದಿದೆ.ಅಂಗನವಾಡಿ ಸಹಾಯಕಿ ಸಾವಿತ್ರಮ್ಮ, ಮಕ್ಕಳನ್ನು ಕೇಂದ್ರದೊಳಗೆ ಬೀಗ ಹಾಕಿ ಜಮೀನು ಕೆಲಸಕ್ಕೆ ಹೋಗಿರುವ ಅಮಾನವೀಯ ಕೃತ್ಯವು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ವಿವರ: ಅಂಗನವಾಡಿಯ ಮುಖ್ಯ ಸಹಾಯಕಿ ಮಾಸಿಕ ಸಭೆಗಾಗಿ ಬೇರೊಂದು ಗ್ರಾಮಕ್ಕೆ ತೆರಳಿದ್ದ ವೇಳೆ, ಸಹಾಯಕಿ ಸಾವಿತ್ರಮ್ಮ ಮಕ್ಕಳನ್ನು ಕೊಠಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾರೆ. ಲಾಕ್ ಆಗಿರುವ ಕೊಠಡಿಯಲ್ಲಿ ಸಿಲುಕಿದ ಮಕ್ಕಳು ಭಯದಿಂದ ಅಳಲು ಆರಂಭಿಸಿದ್ದಾರೆ. ಮಕ್ಕಳ ಅಳುವಿನ ಶಬ್ದ ಕೇಳಿದ ಸ್ಥಳೀಯರು ಬಂದು ನೋಡಿದರೆ ಅಂಗನವಾಡಿ ಲಾಕ್ ಆಗಿದೆ, ಒಳಗಡೆ ಮಕ್ಕಳಿದ್ದಾರೆ. ತಕ್ಷಣ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ಮುಖ್ಯ ಸಹಾಯಕಿ ಸ್ಥಳಕ್ಕೆ ಆಗಮಿಸಿ ಬಾಗಿಲು ತೆರೆದಿದ್ದಾರೆ.
ಗ್ರಾಮಸ್ಥರು ತಪ್ಪಿತಸ್ಥ ಸಹಾಯಕಿ ಸಾವಿತ್ರಮ್ಮ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
Vaastu Tips: ವಾಸ್ತು ಪ್ರಕಾರ ಮನೆಯ ಈ ದಿಕ್ಕಿನಲ್ಲಿ ಬಾಳೆ ಗಿಡ ನೆಡಿ..