Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಟೋಲ್‌ಗೇಟಲ್ಲೇ ಮಲಗಿ ಶಾಸಕಿ ಕರೆಮ್ಮ ಅಹೋರಾತ್ರಿ ಧರಣಿ!
ಕರ್ನಾಟಕಪ್ರಮುಖ

ಟೋಲ್‌ಗೇಟಲ್ಲೇ ಮಲಗಿ ಶಾಸಕಿ ಕರೆಮ್ಮ ಅಹೋರಾತ್ರಿ ಧರಣಿ!

Share
1 Min Read
SHARE

newsics.com

ದೇವದುರ್ಗ: ಸ್ವತಃ ಸಚಿವರೇ ಭರವಸೆ ನೀಡಿದರೂ ಅವೈಜ್ಞಾನಿಕವಾಗಿ ನಿರ್ಮಿಸಿರುವ ಟೋಲ್‌ಗೇಟನ್ನು ತೆರವು ಮಾಡಿಲ್ಲ ಎಂದು ಕೋಪಗೊಂಡು ಶಾಸಕಿ ಕರೆಮ್ಮ ಜಿ.ನಾಯಕ ಅವರು ಟೋಲ್‌ಗೇಟ್‌ ಮುಂದೆಯೇ ಅಹೋರಾತ್ರಿ ಧರಣಿ ನಡೆಸುತ್ತಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ.

ರಾಯಚೂರಿನಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ತಿಂಥಣಿ ಸೇತುವೆಯಿಂದ ಕಲಮಲಾ ಕ್ರಾಸ್ ರಸ್ತೆಯ ಮಧ್ಯೆ ಕಾಕರಗಲ್‌ನಲ್ಲಿ 40 ಕಿ.ಮೀ. ವ್ಯಾಪ್ತಿಯಲ್ಲಿ ಅವೈಜ್ಞಾನಿಕವಾಗಿ 2 ಟೋಲ್‌ ಗೇಟುಗಳನ್ನು ಹಾಕಿ ಕರ ವಸೂಲಿ ಮಾಡುತ್ತಿದ್ದಾರೆ ಎಂದು ಶಾಸಕಿ ಸಭೆಯ ಅಧ್ಯಕ್ಷತೆ ವಹಿಸಿದ ಡಾ। ಶರಣ ಪ್ರಕಾಶ ಪಾಟೀಲ ಅವರ ಗಮನ ಸೆಳೆದು ನೆಲದ ಮೇಲೆ ಧರಣಿ ಕುಳಿತ್ತಿದ್ದರು. ನೀವು ಸಭೆ ಮುಗಿಸಿ ಹೋಗುವುದರೊಳಗೆ ಟೋಲ್‌ ತೆಗೆಸುವೆ ಎಂದು ಸಚಿವರು ಭರವಸೆ ನೀಡಿದ್ದರು.

ಸಭೆ ಬಳಿಕ ತೆರಳುತ್ತಿದ್ದ ಶಾಸಕಿಗೆ ಕಾಕರಗಲ್‌ ಟೋಲ್‌ಗೇಟ್‌ನಲ್ಲಿ ಇನ್ನೂ ಶುಲ್ಕ ವಸೂಲಿ ಮಾಡುತ್ತಿರುವುದು ಕಾಣಿಸಿದೆ. ಇದರಿಂದ ಆಕ್ರೋಶಗೊಂಡ ಅವರು ತಮ್ಮ ಬೆಂಬಲಿಗರೊಂದಿಗೆ ಅಹೋರಾತ್ರಿ ಧರಣಿ ಕುಳಿತರು. ರಸ್ತೆಯಲ್ಲಿಯೇ ಮಲಗಿ ಪ್ರತಿಭಟಿಸಿದ್ದಾರೆ. ಅನೇಕ ಬಾರಿ ಟೋಲ್‌ಗೇಟ್‌ಗಳ ರದ್ದುಪಡಿಸಲು ಒತ್ತಾಯಿಸಿದರೂ ಪ್ರಯೋಜನವಾಗುತ್ತಿಲ್ಲ.

ಉಸ್ತುವಾರಿ ಸಚಿವರ ಭರವಸೆಯೂ ಸುಳ್ಳಾಗಿದೆ. ಅಧಿಕಾರಿಗಳು ಕೂಡ ಒಬ್ಬ ಮಹಿಳೆ ಮತ್ತು ವಿರೋಧ ಪಕ್ಷದ ಶಾಸಕಿ ಆಗಿರುವುದರಿಂದ ನನಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿರುವೆ. ಸರ್ಕಾರ ಕೇವಲ ಭರವಸೆ ನೀಡುತ್ತದೆ. ಆದರೆ ಸಮಸ್ಯೆಗಳು ಜೀವಂತವಾಗಿವೆ ಎಂದು ಶಾಸಕಿ ದೂರಿದರು.

ಇಡೀ ರಾತ್ರಿ ಒಬ್ಬ ಮಹಿಳೆ ಅದರಲ್ಲೂ ಶಾಸಕಿ ರಸ್ತೆ ಮೇಲೆ ಮಲಗಿದ್ದರೂ ಜಿಲ್ಲಾಮಟ್ಟದ ಅಧಿಕಾರಿಗಳಾಗಲಿ, ಆಡಳಿತಾರೂಢ ಜನಪ್ರತಿನಿಧಿಗಳಾಗಲಿ ಗಮನಿಸದಿರುವುದು ನೋವಿನ ಸಂಗತಿ. ಈ ರಸ್ತೆ ಹೆದ್ದಾರಿಯಲ್ಲ. ದೊಡ್ಡ ಉದ್ದಿಮೆಗಳಾಗಲಿ, ಕೈಗಾರಿಗಳಾಗಲಿ ಇಲ್ಲ. ಇಲ್ಲಿ ರೈತರು, ಬಡ ಕುಟುಂಬಗಳು, ಮಧ್ಯಮ ಕುಟುಂಬಗಳು ಮಾತ್ರ ಸಂಚಾರ ಮಾಡುತ್ತಾರೆ. ಆದರೆ ಕೇವಲ 40 ಕಿ.ಮೀ ಅಂತರದಲ್ಲಿಯೇ 2 ಟೋಲ್‌ಗೇಟ್‌ಗಳನ್ನು ಹಾಕಲಾಗಿದೆ. ಆದರೆ ಕಲಬರುಗಿ ರಸ್ತೆ ಮಾರ್ಗದಲ್ಲಿ ಯಾವುದೇ ಟೋಲ್‌ ಗೇಟ್‌ಗಳಿಲ್ಲ. ಆದರೆ ನಮ್ಮಲ್ಲಿ ನಿರ್ಮಿಸಿ ಕರವಸೂಲಿ ನೆಪದಲ್ಲಿ ಬಡವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಕರೆಮ್ಮ ಆಕ್ರೋಶ ವ್ಯಕ್ತಪಡಿಸಿದರು.

MP Mithun arrested 3200 ಕೋಟಿ ರೂ. ಮದ್ಯ ಹಗರಣ: ವೈಎಸ್‌ಆರ್‌ಸಿಪಿ ಸಂಸದ ಮಿಥುನ್‌ ಅರೆಸ್ಟ್

TAGGED:MLA Karemma sleeps at the toll gate and stages an all-night sit-in!
Share This Article
Facebook Twitter Copy Link Print
Previous Article MP Mithun arrested 3200 ಕೋಟಿ ರೂ. ಮದ್ಯ ಹಗರಣ: ವೈಎಸ್‌ಆರ್‌ಸಿಪಿ ಸಂಸದ ಮಿಥುನ್‌ ಅರೆಸ್ಟ್
Next Article 4 ದಿನಗಳ ಕಾಲ ಮೋದಿ ವಿದೇಶ ಪ್ರವಾಸ: ಬ್ರಿಟನ್, ಮಾಲ್ಡೀವ್ಸ್ ಗೆ ಭೇಟಿ

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?