ರಾಜ್ಯಾದ್ಯಂತ ಬಿ – ಖಾತಾ ಆಸ್ತಿಗೆ ದುಪ್ಪಟ್ಟು ತೆರಿಗೆ; ಕರಡು ನಿಯಮ ಹೊರಡಿಸಿದ ಸರ್ಕಾರ

newsics.com ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಿಯಮಾನುಸಾರ ಆಸ್ತಿ ತೆರಿಗೆ ಮತ್ತು ನಾನಾ ಶುಲ್ಕಗಳ ದರ ಪರಿಷ್ಕರಣೆ, ಹೊಸ ತೆರಿಗೆ ಅಂಶಗಳ ಸೇರ್ಪಡೆ ಹಾಗೂ ‘ಬಿ-ಖಾತಾ’ ಪಡೆದ ಆಸ್ತಿಗಳಿಂದ ಮೊದಲ ವರ್ಷ ದುಪ್ಪಟ್ಟು ಆಸ್ತಿ ತೆರಿಗೆ ಸಂಗ್ರಹ ಪ್ರಸ್ತಾವ ಒಳಗೊಂಡ ಕರಡು ನಿಯಮವನ್ನು ಸರ್ಕಾರ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಸುಗಳು) ಕರಡು ನಿಯಮ- 2025′ ಅನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಶುಕ್ರವಾರ ಹೊರಡಿಸಿದೆ. … Continue reading ರಾಜ್ಯಾದ್ಯಂತ ಬಿ – ಖಾತಾ ಆಸ್ತಿಗೆ ದುಪ್ಪಟ್ಟು ತೆರಿಗೆ; ಕರಡು ನಿಯಮ ಹೊರಡಿಸಿದ ಸರ್ಕಾರ