newsics.com
ನವದೆಹಲಿ: ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಜಾಗತಿಕ ಸಮಾನತೆ ಸೂಚ್ಯಂಕದಲ್ಲಿ 25.5 ಅಂಕಗಳನ್ನು ಪಡೆಯುವ ಮೂಲಕ ಭಾರತ ವಿಶ್ವದಲ್ಲಿ 167 ದೇಶಗಳ ಪೈಕಿ 4ನೇ ಸ್ಥಾನ ಪಡೆದುಕೊಂಡಿವೆ. ಈ ಮೂಲಕ ವಿಶ್ವದ ಶ್ರೀಮಂತ ಮತ್ತು ಮುಂಚೂಣಿ ದೇಶಗಳಾದ ಅಮೆರಿಕ, ಬ್ರಿಟನ್ ಮತ್ತು ಚೀನಾ ದೇಶಗಳನ್ನು ಭಾರತ ಹಿಂದಿಕ್ಕಿದೆ.
ಆದಾಯ ಸಮಾನತೆ ಹೊಂದಿರುವ ದೇಶಗಳ ಪೈಕಿ ಭಾರತವು ವಿಶ್ವದಲ್ಲೇ 4ನೇ ಸ್ಥಾನ ಪಡೆದಿದ್ದು, ಸಮಾನತೆಯ ಸಮಾಜವಿರುವ ದೇಶಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಸೂಚ್ಯಂಕದಲ್ಲಿ ಭಾರತವು ಅಮೆರಿಕ, ಚೀನ ಸೇರಿ ಹಲವು ದೊಡ್ಡ ರಾಷ್ಟ್ರಗಳನ್ನು ಹಿಂದಿಕ್ಕಿದೆ. ಮೊದಲ 3 ಸ್ಥಾನಗಳಲ್ಲಿ ಸ್ಲೋವಾಕ್ ರಿಪಬ್ಲಿಕ್, ಸ್ಲೊವೇನಿಯಾ ಹಾಗೂ ಬೆಲಾರಸ್ ಇವೆ. ವರದಿ ಪ್ರಕಾರ, ದೇಶದ ಗಿನಿ ಸೂಚ್ಯಂಕ(ಒಂದು ಆರ್ಥಿಕತೆಯಲ್ಲಿನ ಆದಾಯ ಹಂಚಿಕೆ ಪ್ರತಿನಿಧಿ ಸೂಚ್ಯಂಕ) 25.5 ಇದ್ದು, ಯಾವುದೇ ಜಿ7 ಹಾಗೂ ಜಿ20 ರಾಷ್ಟ್ರ ಈ ಪ್ರಮಾಣ ಹೊಂದಿಲ್ಲ. (ಇಲ್ಲಿ 0 ಸೂಚ್ಯಂಕ ಸಮತೋಲಿತ ಆದಾಯ, 100 ಸೂಚ್ಯಂಕ ಪೂರ್ಣ ಅಸಮತೋಲಿತ ಸೂಚ್ಯಂಕವನ್ನು ಸೂಚಿಸುತ್ತದೆ.)
ಇತ್ತ ಚೀನದ ಸೂಚ್ಯಂಕ 35.7, ಅಮೆರಿಕದ ಸೂಚ್ಯಂಕ 41.8 ಇದೆ. 2011ರಲ್ಲಿ ಭಾರತದ ಗಿನಿ ಸೂಚ್ಯಂಕ 28.8 ಇತ್ತು. ಈ ಬಗ್ಗೆ ಸಮಾಜ ಕಲ್ಯಾಣ ಸಚಿವಾಲಯವು ಪ್ರತಿಕ್ರಿಯಿಸಿ, “ಭಾರತದ ಬೆಳವಣಿಗೆಯು ದೇಶದ ಎಲ್ಲ ಜನರಲ್ಲೂ ಆದಾಯ ಮತ್ತು ಸಂಪತ್ತು ಸಮಾನವಾಗಿ ಹಂಚಿಕೆಯಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿ’ ಎಂದಿದೆ.
Nagara statue: ಗಣೇಶ, ನಾಗರ ಮೂರ್ತಿಗಳನ್ನು ಚರಂಡಿಗೆ ಎಸೆದು ಅಪಮಾನ; ಇಬ್ಬರು ಅಂದರ್