ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

newsics.com ಮುಜಾಫರ್ಪುರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಆಕೆ ಗರ್ಭಿಣಿಯಾದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು, ಆಕೆಯ ಕುಟುಂಬದವರು ಮೂಢನಂಬಿಕೆಯಿಂದ ಮಾಂತ್ರಿಕನ ಬಳಿ ಕರೆದುಕೊಂಡು ಬಂದಿದ್ದರು. ಆ ಮಾಂತ್ರಿಕ ಆಕೆಯ ಮಾವನಿಗೆ ಹೊರಗಡೆ ಕೂರುವಂತೆ ಸೂಚಿಸಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆಕೆಯ ಮಾವ ಆಕೆಯನ್ನು ಶಿವೈಪಟ್ಟಿ ಪೊಲೀಸ್ ಠಾಣೆ ಪ್ರದೇಶದ ಮಧೇರಾ ಗ್ರಾಮದಲ್ಲಿರುವ ಮಾಂತ್ರಿಕನ ಬಳಿಗೆ ಭೂತ ಬಿಡಿಸಲು … Continue reading ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ