ವಿಚಾರಣೆ ವೇಳೆ ಬಯಲಾಯ್ತು ಹುಲಿಗಳ ಸಾವಿನ ರಹಸ್ಯ; ಮುಗ್ದರಂತೆ ವರ್ತಿಸಿದವರೇ ವಿಷ ಹಾಕಿದ್ರು!

newsics.com ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿದ್ದು ಖಚಿತವಾದ ಬೆನ್ನಲ್ಲೇ, ವಿಷ ಹಾಕಿದ ಮೂವರನ್ನು ಬಂಧಿಸಲಾಗಿದೆ. ಹುಲಿ ಹಸುವನ್ನು ಕೊಂದಿದ್ದಕ್ಕೆ ಕೋಪಗೊಂಡು, ಹಸುವಿನ ಮಾಲೀಕ ಕೋನಪ್ಪ ಈ ಕೃತ್ಯವೆಸಗಿದ ರೂವಾರಿ. ಈತನ ಕುಮ್ಮಕ್ಕಿನಿಂದ ಮಾದುರಾಜು, ನಾಗರಾಜು ಎಂಬುವರು ಕೀಟನಾಶಕವನ್ನು ಹಸುವಿನ ದೇಹಕ್ಕೆ ಸಿಂಪಡಿಸಿದ್ದರು. ಈ ಮೂವರನ್ನೂ ಈಗ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇವರ ವಿರುದ್ಧ ವನ್ಯಜೀವಿ … Continue reading ವಿಚಾರಣೆ ವೇಳೆ ಬಯಲಾಯ್ತು ಹುಲಿಗಳ ಸಾವಿನ ರಹಸ್ಯ; ಮುಗ್ದರಂತೆ ವರ್ತಿಸಿದವರೇ ವಿಷ ಹಾಕಿದ್ರು!