ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಬಾಲಕ ಸಾವು!

newsics.com ಕೋಲಾರ : ಕೋಲಾರದಲ್ಲಿ ಘೋರವಾದ ಘಟನೆ ನಡೆದಿದ್ದು, ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕುರುಡುಮಲೆ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಮುಳುಗಿ 9 ವರ್ಷದ ಬಾಲಕ ಸಾವನಪ್ಪಿದ್ದಾನೆ. ಮೃತ ಬಾಲಕನನ್ನು ಕುಶಾಲ್ (9) ಎಂದು ತಿಳಿದುಬಂದಿದೆ. ಈತ ಚಿತ್ರದುರ್ಗ ಜಿಲ್ಲೆಯ ಮುಳ್ಳಾಲಕೆರೆ ತಾಲಕಟ್ಟೆ ನಿವಾಸಿ ಎಂದು ತಿಳಿದುಬಂದಿದೆ.ಇಂದು ಪೋಷಕರೊಂದಿಗೆ ಬಾಲಕ ದೇವಾಲಯಕ್ಕೆ ಬಂದಿದ್ದ. ಆಟವಾಡುವ ವೇಳೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಕುಶಾಲ್ ಸಾವನಪ್ಪಿದ್ದಾನೆ. ಘಟನೆ … Continue reading ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಬಾಲಕ ಸಾವು!