Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > New trend 5 ನಿಮಿಷ ತಬ್ಬಿಕೊಂಡರೆ ದುಡ್ಡು ಕೊಡ್ತಾರೆ ಮಹಿಳೆಯರು! ಹೊಸ ಬಗೆಯ ಬಂಧ ಸೃಷ್ಟಿಸಿದ man mom ಟ್ರೆಂಡ್! ಏನಿದು ಹೊಸ ವರಸೆ?
ಪ್ರಮುಖವಿದೇಶವೈರಲ್

New trend 5 ನಿಮಿಷ ತಬ್ಬಿಕೊಂಡರೆ ದುಡ್ಡು ಕೊಡ್ತಾರೆ ಮಹಿಳೆಯರು! ಹೊಸ ಬಗೆಯ ಬಂಧ ಸೃಷ್ಟಿಸಿದ man mom ಟ್ರೆಂಡ್! ಏನಿದು ಹೊಸ ವರಸೆ?

Share
3 Min Read
SHARE

newsics.com

ಚೀನಾದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಈ ಟ್ರೆಂಡ್ ಹೆಸರೇ ಮ್ಯಾನ್ ಮಾಮ್. ಹೆಸರಲ್ಲೇ ಮಜಾ ಇದೆ. ಇವರನ್ನು ‘ಪುರುಷ ಅಮ್ಮಂದಿರು’ ಎಂದು ಕರೆಯುತ್ತಾರಂತೆ. ಇವರನ್ನು ಐದು ನಿಮಿಷ ತಬ್ಬಿಕೊಳ್ಳಲು ಮಹಿಳೆಯರು 600 ರೂ. ಕೊಡುತ್ತಾರಂತೆ.

ಈ ವಿಚಿತ್ರ ರೂಢಿಗೆ ಕಾರಣ ಇಷ್ಟೆ. ಚೀನಾದ ಗಂಡಸರಂತೆ ಮಹಿಳೆಯರೂ ಇತ್ತೀಚೆಗೆ ಜೀವನ ಸಾಗಿಸಲು ಸಿಕ್ಕಾಪಟ್ಟೆ ದುಡಿಯಬೇಕಾಗಿ ಬಂದಿದೆ. ಜೀವನದ ಜಂಜಾಟ, ಕೆಲಸದ ಒತ್ತಡ, ಡೆಡ್‌ಲೈನ್‌ಗಳು, ಬಿಡುವಿಲ್ಲದೆ ಬದುಕುವವರು ಮಾನಸಿಕ ಸ್ಥೈರ್ಯವನ್ನೇ ಕಳೆದುಕೊಂಡಿರುತ್ತಾರೆ. ಇಂತಹವರಿಗೆ ತಾಳ್ಮೆ, ಸಹನೆ, ಪ್ರೀತಿಯಿಂದ ಸಾಂತ್ವನ ಹೇಳುವವರ ಅಗತ್ಯವಿದೆಯಂತೆ. ಹೀಗಾಗಿಯೇ ಚೀನಾದಲ್ಲಿ ಈ ‘man mom’ ಟ್ರೆಂಡ್‌ ಗಮನ ಸೆಳೆದಿದೆ.

‘ಪುರುಷ ಅಮ್ಮಂದಿರು’ ಎಂದರೆ ಸಾಂತ್ವನ ಹೇಳುವವರು, ಒತ್ತಡ ನಿವಾರಿಸುವವರು. ಅವರನ್ನು ಅಪ್ಪಿಕೊಳ್ಳಲು ಮಹಿಳೆಯರು ಹಣ ನೀಡುತ್ತಾರೆ. ಇದಕ್ಕಾಗಿ ಚಾಟ್‌ ಅಪ್ಲಿಕೇಶನ್‌ಗಳಿವೆ. ಮಾಲ್‌ಗಳು, ಸುರಂಗಮಾರ್ಗ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಪ್ಪುಗೆ ನೀಡಲು ‘ಪುರುಷ ಅಮ್ಮಂದಿರು’ ಇರುತ್ತಾರೆ. ಹೆಚ್ಚಿನ ಅಪ್ಪುಗೆಗಳು ಶಾಪಿಂಗ್ ಕೇಂದ್ರಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ. ಇದಕ್ಕೆ 20ರಿಂದ 50 ಯುವಾನ್ (250 ರೂ.ಗಳಿಂದ 600 ರೂ.) ವರೆಗೆ ವೆಚ್ಚವಾಗುತ್ತದೆ.

‘ನಾನು ಒತ್ತಡದಲ್ಲಿದ್ದೇನೆ. ಒತ್ತಡ ನಿಭಾಯಿಸಲು ಪುರುಷ ಅಮ್ಮನೊಂದಿಗೆ ಅಪ್ಪುಗೆಗೆ ಹಣ ನೀಡಲು ಬಯಸಿದ್ದೇನೆʼ ಎಂದು ವಿದ್ಯಾರ್ಥಿನಿಯೊಬ್ಬಳು ಆನ್‌ಲೈನ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಳು.

ಮೂರು ಗಂಟೆಗಳ ಹೆಚ್ಚುವರಿ ಕೆಲಸದ ಒತ್ತಡದಲ್ಲಿದ್ದ ಒಬ್ಬ ಮಹಿಳೆ ಪುರುಷ ಅಮ್ಮನನ್ನು ಅಪ್ಪಿಕೊಂಡಳಂತೆ. ಈ ಅಪ್ಪುಗೆ ಆಕೆಗೆ ತಾಯಿಯನ್ನು ಅಪ್ಪಿಕೊಂಡ ಭಾವನೆ ನೀಡಿತು. ಆ ಮಹಿಳೆ ತನ್ನ ಬಾಸ್‌ ಹಿಂಸೆಯ ಬಗ್ಗೆ ಹೇಳಿಕೊಂಡಳು. ಆ ಪುರುಷ ಅಮ್ಮ ಈಕೆಯ ಬೆನ್ನು ತಟ್ಟಿ ಸಮಾಧಾನಪಡಿಸಿದನಂತೆ.

ನಿಜಕ್ಕೂ ಅಪ್ಪುಗೆಯ ಬಗ್ಗೆ ವಿಜ್ಞಾನವೂ ಒಳ್ಳೆಯ ಮಾತು ಹೇಳುತ್ತದೆ. ಆಲಿಂಗನ ಅನ್ನೋದು ಆನಂದ, ಆಲಿಂಗನ ಎಂಬುದು ಭದ್ರತೆ. ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ, ಸಂಗಾತಿಯ ಅಪ್ಪುಗೆಗೆ ವಿಶೇಷ ಅರ್ಥ, ಬಾಂಧವ್ಯ ಇದೆ. ಮೊದಲ ಮುತ್ತು, ಮೊದಲ ಅಪ್ಪುಗೆಗೆ ಚಡಪಡಿಸೋದು ಪ್ರೀತಿಸೋ ಪ್ರೇಮಿಗಳ ಲಕ್ಷಣ. ‘man mom’ ಅನ್ನೋದು ಹೊಸದಾಗಿದ್ರೂ ಚೀನಾದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಅಮ್ಮನ ಅಪ್ಪುಗೆಗಾಗಿ ಪ್ರೀತಿಯಿಂದ ತಬ್ಬಿಕೊಳ್ಳಲು ಬಯಸುವವರು ಇವರನ್ನು ತಬ್ಬಿಕೊಂಡು ಸಾಂತ್ವನ ಪಡೆಯುತ್ತಾರೆ.

ಚೀನಾದ ಯುವತಿಯರು 5 ನಿಮಿಷದ ‘man mom’ಗೆ ಒಪ್ಪಿಕೊಂಡು 20-50 ಯುವಾನ್ ಚಾರ್ಜ್ ಮಾಡುತ್ತಿದ್ದಾರೆ. 20-50 ಯುವಾನ್ ಅಂದ್ರೆ ಭಾರತೀಯ ರೂಪಾಯಿಯಲ್ಲಿ 250-600 ರೂಪಾಯಿಗಳು. 5 ನಿಮಿಷ ತಬ್ಬಿಕೊಳ್ಳುವ ಯುವಕರು ಕೆಲವೊಂದು ಗುಣ-ಲಕ್ಷಣ ಮತ್ತು ಷರತ್ತುಗಳನ್ನು ಪೂರೈಸಬೇಕು.

5 ನಿಮಿಷ ತಬ್ಬಿಕೊಳ್ಳಲು ಬಯಸುವ ಯುವಕರು, ಯುವತಿಯರು ಇಷ್ಟಪಡುವ ಸ್ವಭಾವ ಹೊಂದಿರಬೇಕು. ನೋಡಲು ಚೆನ್ನಾಗಿರಬೇಕು. ಗುಡ್ ಲುಕ್ಕಿಂಗ್, ಹ್ಯಾಂಡ್ಸಮ್‌, ಸೌಮ್ಯತೆ, ತಾಳ್ಮೆಯನ್ನು ಮೊದಲಿಗೆ ನಿರೀಕ್ಷೆ ಮಾಡಲಾಗುತ್ತದೆ. ಎಲ್ಲಾ ಓಕೆ ಆದ ಮೇಲೆ ಮಾಲ್‌ಗಳು, ಸಬ್‌ವೇ ಸ್ಟೇಷನ್‌ ಸೇರಿದಂತೆ ಸಾರ್ವಜನಿಕ ಜಾಗಗಳಲ್ಲಿ ಈ ರೀತಿ ತಬ್ಬಿಕೊಳ್ಳಲಾಗುತ್ತಿದೆ.

ಸೋಷಿಯಲ್ ಮೀಡಿಯಾ ಚಾಟ್ ಆ್ಯಪ್‌ಗಳಲ್ಲಿ ಸ್ಥಳ ಹಾಗೂ ಸಮಯ ನಿಗದಿ ಮಾಡಿಕೊಳ್ಳಲಾಗುತ್ತದೆ. ಯುವತಿಯ ಷರತ್ತುಗಳು ಪೂರೈಸಿದ ಯುವಕರು 5 ನಿಮಿಷ ತಬ್ಬಿಕೊಳ್ಳುವ ಮುಖಾಂತರ ಚೀನಾದಲ್ಲಿ ಒತ್ತಡ ಹಾಗೂ ಹಲವಾರು ಮಾನಸಿಕ ಖಿನ್ನತೆಗಳಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.

ಚೌ ಲಿಂಗ್‌ ಎಂಬ ಯುವಕ ಹೀಗೆ ಚಾಟ್ ಆ್ಯಪ್‌ಗಳಲ್ಲಿ 34 ಯುವತಿಯರಿಗೆ ಇಂತಹ ಅವಕಾಶ ಕೊಟ್ಟು ಬರೋಬ್ಬರಿ 21,000 ರೂಪಾಯಿಗಳನ್ನು ಸಂಪಾದಿಸಿದ್ದಾನಂತೆ.

ನನ್ನಿಂದ ಕೆಲವು ಮಹಿಳೆಯರು ನಿರಾಳರಾಗುವ ಅವಕಾಶ ಸಿಕ್ಕಿದೆ. ಆದರೆ ಇದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಳ್ಳುವ ಆಸೆ ನನಗಿಲ್ಲ ಎಂದಿದ್ದಾನೆ. ಕೆಲವರು 5 ನಿಮಿಷ ತಬ್ಬಿಕೊಂಡ ಬಳಿಕ ಗಿಫ್ಟ್‌ಗಳನ್ನು ಕೊಟ್ಟು ಹೋಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

RCB leaving Bengaluru ಸರ್ಕಾರದ ನಡೆಯಿಂದ RCBಗೆ ಮುಜುಗರ: ಬೆಂಗಳೂರು ತೊರೆಯುವ ಸಾಧ್ಯತೆ, ಆರ್‌ಸಿಬಿ ಬೇಸ್ ಎಲ್ಲಿಗೆ ಶಿಫ್ಟ್?

ಹನಿಮೂನ್‌ಗೆ ಹೊರಡುವ ಮೊದಲೇ ಕೊಲೆ ಪ್ಲ್ಯಾನ್! ಪತ್ನಿ ಹೇಳಿದಂತೆ 10 ಲಕ್ಷ ಮೊತ್ತದ ಚಿನ್ನಾಭರಣ ಧರಿಸಿ ಹೋಗಿದ್ದ… ತಾಯಿ ಕಣ್ಣೀರು

TAGGED:Women will pay you for a 5-minute hug! The man-mom trend has created a new kind of bond!
Share This Article
Facebook Twitter Copy Link Print
Previous Article RCB leaving Bengaluru ಸರ್ಕಾರದ ನಡೆಯಿಂದ RCBಗೆ ಮುಜುಗರ: ಬೆಂಗಳೂರು ತೊರೆಯುವ ಸಾಧ್ಯತೆ, ಆರ್‌ಸಿಬಿ ಬೇಸ್ ಎಲ್ಲಿಗೆ ಶಿಫ್ಟ್?
Next Article ನನ್ನನ್ನು ಗರ್ಭಿಣಿ ಮಾಡಿ ಐದು ಲಕ್ಷ ರೂ. ಪಡೆದುಕೊಳ್ಳಿ: ಮಹಿಳೆಯರ ಆಫರ್ ನಂಬಿ ಮೋಸಹೋದ ಮಂದಿ

Popular Posts

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?