newsics.com
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಯ ಭಾರತ- ಪಾಕಿಸ್ತಾನ ಉದ್ವಿಗ್ನತೆ ಬಳಿಕ ವಾಟರ್ ವಾರ್ ಜೋರಾಗಿದೆ. ನೀರಿಗಾಗಿ ಭಾರತದ ಬಳಿ ಪಾಕಿಸ್ತಾನ ಅಂಗಲಾಚುತ್ತಿದೆ.
ಕಳೆದ ಏಪ್ರಿಲ್ 22ರಿಂದ ಇಲ್ಲಿಯವರೆಗೂ ಪಾಕಿಸ್ತಾನ, ಭಾರತದ ಜಲಶಕ್ತಿ ಸಚಿವಾಲಯಕ್ಕೆ 4 ಬಾರಿ ಪತ್ರ ಬರೆದು ಇಂಡಸ್ ನದಿ ನೀರಿಗಾಗಿ ಭಿಕ್ಷೆ ಬೇಡುತ್ತಿದೆ. ಪಾಕಿಸ್ತಾನದ 4 ಪತ್ರಗಳಿಗೂ ಭಾರತ ತಕ್ಕ ಉತ್ತರವನ್ನು ನೀಡಿದೆ.
ಭಾರತದ ಜಲಶಕ್ತಿ ಸಚಿವಾಲಯ ಇಂಡಸ್ ನದಿ ನೀರು ಹಂಚಿಕೆ ಒಪ್ಪಂದವನ್ನು ಪರಸ್ಪರ ನಂಬಿಕೆಯ ಆಧಾರದ ಮೇಲೆ ಮಾಡಿಕೊಳ್ಳಲಾಗಿತ್ತು. ಆದರೆ ಪಾಕಿಸ್ತಾನ, ಭಾರತದ ವಿರುದ್ಧ ಭಯೋತ್ಪಾದನೆ ನಡೆಸುತ್ತಿದೆ. ಇದರಿಂದ ಪರಸ್ಪರ ನಂಬಿಕೆ, ಗೌರವ, ಶಾಂತಿಗೆ ಭಂಗ ಬಂದಿದೆ. ಹೀಗಾಗಿ ಇಂಡಸ್ ನದಿಯ ನೀರನ್ನು ಪಾಕ್‌ಗೆ ಹರಿಸಲ್ಲ ಎಂದು ಸ್ಪಷ್ಟಪಡಿಸಿದೆ.