newsics.com
ಒಬ್ಬ ಮಹಿಳೆ ತನ್ನ ಗೆಳೆಯನೊಂದಿಗೆ ಬೀಚ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೃಹತ್ ಅಲೆಗಳು ಅವಳನ್ನು ಕೊಚ್ಚಿಕೊಂಡು ಹೋಗಿರುವ ಘಟನೆ ರಷ್ಯಾದಲ್ಲಿ ನಡೆದಿದೆ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಜೋಡಿಗಳು ರೊಮಾನ್ಸ್ ಮಾಡುತ್ತಿರುವುದನ್ನು ನೋಡಬಹುದು. ಸಂತೋಷದಿಂದ ಆಟವಾಡುತ್ತಿದ್ದ ಜೋಡಿ ಬೃಹತ್ ಅಲೆಗಳಿಗೆ ಸಿಲುಕಿದ ಕೊಚ್ಚಿ ಹೋಗಿದ್ದಾರೆ.
ದೊಡ್ಡ ಅಲೆ ಅವರನ್ನು ಅಪ್ಪಳಿಸುವ ಮೊದಲು ಈಜೋಡಿ ಕಡಲತೀರದ ಅಂಚಿನಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ನಂತರದ ಅಲೆಗಳು ಅವರ ಮೇಲೆ ಬರುತ್ತಿದ್ದಂತೆ ಅವರು ನಿಂತು ಪರಸ್ಪರ ಹಿಡಿದಿಟ್ಟುಕೊಳ್ಳುವುದನ್ನು ಕಾಣಬಹುದು. ಅದರ ನಂತರ, ಅಲೆಯ ಪ್ರವಾಹವು ಅವರನ್ನು ಕೆಳಗೆ ಬೀಳಿಸಿದೆ. ನಂತರ ಮತ್ತೊಂದು ಬೃಹತ್ ಅಲೆ ಇಬ್ಬರ ಮೇಲೆ ಅಪ್ಪಳಿಸುತ್ತದೆ. ಆದರೆ, ಪುರುಷ ಈ ಕಡೆ ಬಿದ್ದಾಗ ಮಹಿಳೆ ಸಮುದ್ರದ ಒಳಗೆ ಸೇರಿಕೊಳ್ಳುವುದನ್ನು ನೋಡಬಹುದು. ತನ್ನ ಪ್ರೇಯಸಿ ಕಾಣದಾಗ ಆತ ಹತಾಶವಾಗಿ ಹುಡುಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
https://www.instagram.com/reel/DJ6bQNRhJDD/?igsh=bjVkbTI5dTNiYTdy