RCB celebration ಆರ್ಸಿಬಿ ತಂಡ ನೋಡಲು ಮುಗಿಬಿದ್ದ ಫ್ಯಾನ್ಸ್; ಜಾತ್ರೆಯಂತಾದ ಮೆಟ್ರೋ ಸ್ಟೇಷನ್!

newsics.com ಬೆಂಗಳೂರು: ಬೆಂಗಳೂರಿಗೆ ವಿಜಯೋತ್ಸವ ಆಚರಿಸಲು ಆಗಮಿಸಿರುವ ಆರ್ಸಿಬಿ ತಂಡವನ್ನು ನೋಡಲು ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ವಾಹನಗಳ ಪ್ರವೇಶ ನಿಷೇಧಿಸಿರುವುದರಿಂದ ಬಹುತೇಕ ಅಭಿಮಾನಿಗಳು ಮೆಟ್ರೋ ನಿಲ್ದಾಣಕ್ಕೆ ನುಗ್ಗಿದ್ದಾರೆ. ಇದರಿಂದಾಗಿ ಇಂದು ಮಧ್ಯಾಹ್ನದಿಂದ ಎಂಜಿ ರಸ್ತೆ, ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ಗಳು ಜಾತ್ರೆಯಂತಾಗಿದ್ದವು. ಈ ಮಾರ್ಗದ ಮೆಟ್ರೋ ರೈಲುಗಳಲ್ಲಿ ಕಾಲು ಹಾಕಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ವಿಜಯ ಯಾತ್ರೆಗೂ ಮುನ್ನವೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಂಟಾದ ಕಾಲ್ತುಳಿತದಲ್ಲಿ 6 … Continue reading RCB celebration ಆರ್ಸಿಬಿ ತಂಡ ನೋಡಲು ಮುಗಿಬಿದ್ದ ಫ್ಯಾನ್ಸ್; ಜಾತ್ರೆಯಂತಾದ ಮೆಟ್ರೋ ಸ್ಟೇಷನ್!