newsics.com
ಚೆನ್ನೈ: ತಮಿಳು ನಿರ್ದೇಶಕ ವಿಕ್ರಂ ಸುಗುಮಾರನ್ (47) ಹೃದಯಾಘಾತದಿಂದನಿಧನರಾಗಿದ್ದಾರೆ.
ನಿರ್ಮಾಪಕರೊಬ್ಬರಿಗೆ ಹೊಸ ಚಿತ್ರದ ಕತೆ ಹೇಳಿ ಮಧುರೈನಿಂದ ಚೆನ್ನೈಗೆ ಬಸ್ನಲ್ಲಿ ಹೊರಟಿದ್ದಾಗ, ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ, ಅವರು ಬದುಕುಳಿಯಲಿಲ್ಲ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪರಮಕುಡಿಯಲ್ಲಿ ಜನಿಸಿದ ವಿಕ್ರಮ್ ಸುಕುಮಾರನ್, ಗ್ರಾಮೀಣ ಜೀವನ ಮತ್ತು ಸಾಮಾಜಿಕ ವಿಷಯಗಳನ್ನು ಅಥೆಂಟಿಕ್ ಆಗಿ ಚಿತ್ರಿಸುವ ಮೂಲಕ ಖ್ಯಾತರಾದವರು. 2013ರಲ್ಲಿ ಬಿಡುಗಡೆಯಾದ ತಮ್ಮ ಮೊದಲ ಚಿತ್ರ ಮಧ ಯಾನೈ ಕೂಟ್ಟಂ ಗ್ರಾಮೀಣ ತಮಿಳುನಾಡಿನ ಜಾತಿ ಆಧಾರಿತ ಘರ್ಷಣೆಯನ್ನು ಕಠಿಣವಾಗಿ ಚಿತ್ರಿಸಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಚಿತ್ರದಲ್ಲಿ ಕದಿರ್ ಮತ್ತು ಅಂಜು ನಟಿಸಿದ್ದರು.