newsics.com
ಚಾಮರಾಜನಗರ: ಬಂಡೀಪುರ ಅಭಯಾರಣ್ಯಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ದಂಪತಿಗಳಿಗೆ ಅರಣ್ಯ ಇಲಾಖೆ 25 ಸಾವಿರ ರೂ ದಂಡ ವಿಧಿಸಿದೆ.
ಬೆಂಗಳೂರು ಮೂಲದ ಪಲ್ಲವಿ ಮತ್ತು ಘೋಷ್ ಎಂಬುವವರಿಗೆ ದಂಡ ವಿಧಿಸಲಾಗಿದೆ. ಇಬ್ಬರು ಕಾಡಿಗೆ ಅತಿಕ್ರಮ ಪ್ರವೇಶ ಮಾಡಿ ಪೋಟೋ ತೆಗೆಯುತ್ತಿದ್ದರು ಎನ್ನಲಾಗಿದೆ. ಬಂಡೀಪುರದ ಮಂಗಲ ರಸ್ತೆ ಸಮೀಪ ಫೋಟೋ ಶೂಟ್ ಮಾಡುತ್ತಿದ್ದರು.
ಕಾಡಿನ ಹಾದಿಯಲ್ಲಿ ಫೋಟೋ ತೆಗೆಯುವುದು, ವಾಹನದಿಂದ ಕೆಳಕ್ಕಿಳಿಯುವುದು, ಪ್ರಾಣಿಗಳಿಗೆ ಆಹಾರ ಕೊಡುವುದು ದಂಡಾರ್ಹ ಅಪರಾಧ. ಇದರ ಅರಿವಿಲ್ಲದೇ ಫೋಟೋಶೂಟ್ ಕೂಡ ನಡೆಸಿದ್ದಾರೆ. ಫೋಟೋಶೂಟ್ ವಿಚಾರ ಗೊತ್ತಾಗಿ ಅಭಯಾರಣ್ಯಕ್ಕೆ ಅತಿಕ್ರಮಣ ಪ್ರವೇಶಿಸಿದ್ದ ಇಬ್ಬರಿಗೆ ವಿಧಿಸಿ, ಅರಣ್ಯ ಇಲಾಖೆ ಎಚ್ಚರಿಕೆ ಕೊಟ್ಟಿದೆ.