ಹಿಮಾಚಲ ಪ್ರದೇಶದಲ್ಲಿ ಮಳೆರಾಯನ ಆರ್ಭಟ; ಮಳೆಗೆ ಕೊಚ್ಚಿಹೋದ 15 ವಾಹನಗಳು

newsics.com ಧರ್ಮಶಾಲಾ: ಹಿಮಾಚಲ ಪ್ರದೇಶದ ಕುಲ್ಲು ಮತ್ತು ರಾಂಪುರ್ ಬಳಿಯ ಜಮತ್ಖಾನಾ, ನಿರ್ಮಂದ್ ಮತ್ತು ಅನಿ ಪ್ರದೇಶಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಸುಮಾರು 15 ವಾಹನಗಳು ಕೊಚ್ಚಿ ಹೋಗಿದ್ದು, ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಮಳೆಯು ಜನರಿಗೆ ಅಪಾರ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿದೆ.ಶಿಮ್ಲಾ ಮತ್ತು ಕುಲ್ಲು ಜಿಲ್ಲೆಗಳ ಗಡಿಯಲ್ಲಿರುವ ಜಮತ್ಖಾನಾ ನಲಾದಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಐದು ವಾಹನಗಳು ಕೊಚ್ಚಿಹೋಗಿ ಸಟ್ಲುಜ್ ನದಿ ದಂಡೆ ಸೇರಿವೆ. ಆದರೆ ಐದರಿಂದ ಆರು ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ.ಜಮತ್ಖಾನಾ … Continue reading ಹಿಮಾಚಲ ಪ್ರದೇಶದಲ್ಲಿ ಮಳೆರಾಯನ ಆರ್ಭಟ; ಮಳೆಗೆ ಕೊಚ್ಚಿಹೋದ 15 ವಾಹನಗಳು