major landslide near Kumta ಕುಮಟಾ ಬಳಿ ಮತ್ತೆ ಭಾರೀ ಗುಡ್ಡ ಕುಸಿತ, ರಸ್ತೆ ಸಂಚಾರ ಬಂದ್
newsics.com ಕಾರವಾರ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಮಟಾ ತಾಲೂಕಿನಲ್ಲಿ ಮತ್ತೆ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಕುಮಟಾದ ರಾಷ್ಟ್ರೀಯ ಹೆದ್ದಾರಿಯಿಂದ ಮಿರ್ಜಾನ- ಕತಗಾಲ ತೆರಳುವ ರಸ್ತೆಯಲ್ಲಿ ಖೈರೆ ಬಳಿ ಗುಡ್ಡ ಕುಸಿದಿದ್ದರಿಂದಾಗಿ ತಾತ್ಕಾಲಿಕವಾಗಿ ರಸ್ತೆ ಬಂದ್ ಮಾಡಲಾಗಿದೆ. ಖೈರೆ ಗುಡ್ಡ ಹಂತ ಹಂತವಾಗಿ ಕುಸಿದು ಸಂಪೂರ್ಣ ಗುಡ್ಡದೊಂದಿಗೆ ರಸ್ತೆಯು ಕುಸಿಯುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಈ ರಸ್ತೆಯಲ್ಲಿ ಸತತವಾಗಿ ವಾಹನಗಳು ಸಂಚರಿಸುತ್ತಿದ್ದು ಗುಡ್ಡಕುಸಿತದಲ್ಲಿ ಪ್ರಾಣಾಪಾಯವಾಗುವ ಸಾಧ್ಯತೆಯ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ರಸ್ತೆಯನ್ನು ಮುಚ್ಚಲಾಗಿದೆ. … Continue reading major landslide near Kumta ಕುಮಟಾ ಬಳಿ ಮತ್ತೆ ಭಾರೀ ಗುಡ್ಡ ಕುಸಿತ, ರಸ್ತೆ ಸಂಚಾರ ಬಂದ್
Copy and paste this URL into your WordPress site to embed
Copy and paste this code into your site to embed