DEADLY Bus flip : ಬೆಟ್ಟದಿಂದ ಬಸ್ ಉರುಳಿ 21 ಸಾವು, 14 ಮಂದಿಗೆ ಗಾಯ

newsics.com ಕೊಲಂಬೋ: ಕಂದಕಕ್ಕೆ ಬಸ್ ಉರುಳಿದ ಪರಿಣಾಮ 21 ಮಂದಿ ಸಾವನ್ನಪ್ಪಿ, ಕನಿಷ್ಠ 14 ಜನರು ಗಾಯಗೊಂಡ ಘಟನೆ ಶ್ರೀಲಂಕಾದ ಬೆಟ್ಟ ಪ್ರದೇಶದಲ್ಲಿ ನಡೆದಿದೆ. ರಾಜಧಾನಿ ಕೊಲಂಬೊದಿಂದ ಪೂರ್ವಕ್ಕೆ ಸುಮಾರು 140 ಕಿಲೋಮೀಟರ್ (86 ಮೈಲುಗಳು) ದೂರದಲ್ಲಿರುವ ಕೋಟ್ಮಲೆ ಪಟ್ಟಣದ ಬಳಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಲಂಕಾದಲ್ಲಿ ಮಾರಣಾಂತಿಕ ಬಸ್ ಅಪಘಾತಗಳು ಸಾಮಾನ್ಯವಾಗಿವೆ. ಅಜಾಗರೂಕ ಚಾಲನೆ ಮತ್ತು ಕಳಪೆ ನಿರ್ವಹಣೆಯ ರಸ್ತೆಗಳಿಂದಾಗಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತವೆ. Exam … Continue reading DEADLY Bus flip : ಬೆಟ್ಟದಿಂದ ಬಸ್ ಉರುಳಿ 21 ಸಾವು, 14 ಮಂದಿಗೆ ಗಾಯ