newsics.com
ಇಬ್ಬರು ವಿವಾಹಿತ ವಯಸ್ಕರು ಪರಸ್ಪರ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದರೆ, ಅದು ಅಪರಾಧವಾಗುವುದಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್‌ನ ಜಲ್ಪೈಗುರಿ ಪೀಠ ಮಹತ್ವದ ತೀರ್ಪನ್ನು ನೀಡಿದೆ.
ಈ ಪ್ರಕರಣದಲ್ಲಿ ವಿವಾಹಿತ ಮಹಿಳೆಯೊಬ್ಬರು ವಿವಾಹಿತ ಪುರುಷನೊಬ್ಬ ತನ್ನನ್ನು ಮದುವೆಯಾಗುವ ಭರವಸೆ ನೀಡಿ ಲೈಂಗಿಕ ಸಂಬಂಧಕ್ಕೆ ಪ್ರೇರೇಪಿಸಿದನೆಂದು ಆರೋಪಿಸಿದ್ದರು. ಆದರೆ, ಪುರುಷನ ಕಡೆಯಿಂದ ಯಾವುದೇ ಮೋಸದ ಉದ್ದೇಶ ಕಂಡುಬಂದಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು. ಇಬ್ಬರೂ ತಮ್ಮ ವೈವಾಹಿಕ ಜವಾಬ್ದಾರಿಗಳ ಬಗ್ಗೆ ಅರಿತಿದ್ದರು ಮತ್ತು ಸಂಬಂಧವು ಮೊದಲಿನಿಂದಲೂ ಪರಸ್ಪರ ಒಪ್ಪಿಗೆಯಿಂದಲೇ ಬೆಳೆದಿತ್ತು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.
ಮಹಿಳೆಯ ಗಂಡನಿಗೆ ಈ ಸಂಬಂಧದ ಬಗ್ಗೆ ತಿಳಿದು ಅವರು ಬೇರೆಯಾಗಲು ನಿರ್ಧರಿಸಿದಾಗ, ಮಹಿಳೆ ಆ ಪುರುಷನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಳು. ಆತ ನಿರಾಕರಿಸಿದಾಗ ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಳು.
https://www.newsics.com/2025/04/16/rajat-kishan-arrested-again/