newsics.com
ಸೋನಿಪತ್: ವ್ಹೀಲ್ ಬ್ಯಾಗ್‌ನಲ್ಲಿ ಅಡಗಿಕೊಂಡು ಯುವತಿ, ಹಾಸ್ಟೆಲ್ ಒಳಗೆ ಬರಲು ಪ್ರಯತ್ನಿಸಿದ ಘಟನೆ ಹರಿಯಾಣದ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.
ಆದ್ರೆ ಭದ್ರತಾ ಸಿಬ್ಬಂದಿಯ ಜಾಣತನದಿಂದ ಯುವತಿಯ ಪ್ಲಾನ್ ಫೇಲ್ ಆಗಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಯುವಕನೋರ್ವ ದೊಡ್ಡದಾದ ವ್ಹೀಲ್ ಸೂಟ್‌ಕೇಸ್ ತೆಗೆದುಕೊಂಡು ಹಾಸ್ಟೆಲ್‌ನೊಳಗೆ ಬರುತ್ತಿರುತ್ತಾನೆ. ಆದರೆ ಪ್ರವೇಶದ್ವಾರದ ಬಳಿ ಭದ್ರತಾ ಸಿಬ್ಬಂದಿ ಯುವಕ ಹಿಡಿದುಕೊಂಡು ಬಂದ ಸೂಟ್‌ಕೇಸ್ ಓಪನ್ ಮಾಡಿಸಿದ್ದಾರೆ. ಸೂಟ್‌ಕೇಸ್ ತೆರೆಯುತ್ತಿದ್ದಂತೆ ಅದರೊಳಗೆ ಯುವತಿ ಕುಳಿತಿರೋದು ಕಂಡು ಬಂದಿದೆ. ಈ ಎಲ್ಲಾ ಘಟನೆಯ ಹಾಸ್ಟೆಲ್‌ನಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಯಾಗಿದೆ. ನಂತರ ಈ ವಿಡಿಯೋವನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.