newsics.com
ಗಾಂಧಿನಗರ: ಮಕ್ಕಳ ಪ್ರಾಣವನ್ನು ಉಳಿಸಲು ತಾಯಿ ಏನು ಬೇಕಾದ್ರೂ ಮಾಡ್ತಾಳೆ ಎಂಬುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.ಈ ವೇಳೆ ಅದೇ ಮಹಡಿಯಲ್ಲಿದ್ದ ಮಹಿಳೆ ತನ್ನ ಮಕ್ಕಳನ್ನ ಬೆಂಕಿಯಿಂದ ಕಾಪಾಡಲು ಕೆಳಗಿನ ಮಹಡಿಯಲ್ಲಿದ್ದವರಿಗೆ ಆ ಮಕ್ಕಳನ್ನ ಕಿಟಕಿಯಿಂದ ಕೆಳಗೆ ನೀಡಿ ರಕ್ಷಿಸಿದ್ದಾಳೆ.
ಈ ಘಟನೆ ಅಹಮದಾಬಾದ್‌ನ ಖೋಖ್ರಾ ಪ್ರದೇಶದಲ್ಲಿ ನಡೆದಿದೆ.ಆ ಮಕ್ಕಳನ್ನ ಕಾಪಾಡಿದ್ದಷ್ಟೇ ಅಲ್ಲದೆ ತಾನೂ ಮೂರನೇ ಮಹಡಿಯಿಂದ ಇಳಿಯೋದಕ್ಕೆ ಮುಂದಾಗಿದ್ದಾಳೆ.ಹೀಗೆ ಇಳಿಸುವಾಗ ಕೊಂಚ ಜಾರಿದ್ದರೂ ಪ್ರಾಣಾಪಾಯ ಉಂಟಾಗೋ ಸಾಧ್ಯತೆ ಎದುರಾಗಿತ್ತು. ಸ್ವಲ್ಪದರಲ್ಲಿ ಮಹಿಳೆ ಪಾರಾಗಿದ್ದಾರೆ. ಇನ್ನೂ ತಾಯಿ ಬೆಂಕಿಯಿಂದ ತನ್ನ ಮಕ್ಕಳನ್ನು ರಕ್ಷಣೆ ಮಾಡುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://x.com/ManojSh28986262/status/1910677875453309001
https://www.newsics.com/2025/04/12/two-people-died-on-the-spot-after-their-bike-crashed-into-a-tree/