newsics.com
ಯಾರಿಗೇ ಆಗಲಿ ವಿವಾಹವು ಅತ್ಯಂತ ಮಹತ್ವದ ದಿನವಾಗಿರುತ್ತೆ. ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳು ಒಂದಾಗುವ ಮತ್ತು ತಮ್ಮ ಇಡೀ ಜೀವನವನ್ನು ಒಟ್ಟಿಗೆ ಬದುಕಲು ಎದುರು ನೋಡುತ್ತಿರುವ ದಿನ. ಎಲ್ಲರೂ ತಮ್ಮ ಮದುವೆ ಸಖತ್ ಡಿಫರೆಂಟ್ ಆಗಿ ಇರಬೇಕು ಎಂದು ಬಯಸುತ್ತಾರೆ. ಅದರಲ್ಲಿಯೂ ಕ್ರಿಯೇಟ್ ಮೈಂಡ್ ಇರುವ ವಧು ಅಥವಾ ವರ, ತಮ್ಮ ಮದುವೆಯನ್ನು ವಿಶಿಷ್ಟವಾಗಿ ಆಚರಿಸಿಕೊಳ್ಳಬೇಕು ಎಂದು ಬಯಸುವುದು ಸಹಜ. ಆದರೆ ಇಲ್ಲೊಂದು ಆಧುನಿಕ ಸೀತಾ ಸ್ವಯಂವರ ನಡೆದಿದೆ.
ವಧು ಸರ್ವಾಲಂಕಾರ ಮಾಡಿಕೊಂಡು ವೇದಿಕೆ ಮೇಲೆ ನಿಂತಿದ್ದಾಳೆ. ಪಕ್ಕದಲ್ಲಿಯೇ ಇರುವ ಟೇಬಲ್ ಮೇಲೆ ಧನುಸ್ಸು ಇಡಲಾಗಿದೆ. ಹಲವು ಪುರುಷರು ಬಂದು ಆ ಧನುಸ್ಸನ್ನು ಎತ್ತಲು ಟ್ರೈ ಮಾಡಿದ್ರೂ ಅದು ಆಗಲಿಲ್ಲ. ಕೊನೆಗೆ ಯುವಕನೊಬ್ಬ ಅದನ್ನು ಸುಲಭದಲ್ಲಿ ಎತ್ತಿ, ಮುರಿದು ಪಕ್ಕದಲ್ಲಿಯೇ ಇದ್ದ ವಧುವನ್ನು ಮದ್ವೆಯಾದ.
ವಿಡಿಯೋ ಮಾತ್ರ ಸಖತ್ ವೈರಲ್ ಆಗಿದೆ.
ಮೊದಲೇ ಮುರಿದುಹೋದ ಧನುಸ್ಸನ್ನು ಇಡಲಾಗಿದೆ. ಕೆಲವು ಪುರುಷರು ಬಂದು ಅದನ್ನು ಎತ್ತಲು ನೋಡಿದ್ದಾರೆ. ಅದನ್ನು ಎತ್ತಲು ಆಗಲಿಲ್ಲ. ತಮಾಷೆಯಾಗಿದ್ದರೂ ಇದು ಸೀರಿಯಸ್ ಎನ್ನುವ ರೀತಿಯಲ್ಲಿ ಇದೆ. ಕೊನೆಗೆ ನಿಜವಾದ ವರ ಬಂದು ಅದನ್ನು ಸುಲಭದಲ್ಲಿ ಎತ್ತಿದ್ದಾನೆ. ತಮಾಷೆಯ ವಿಷಯ ಏನೆಂದರೆ, ಅದು ಎತ್ತುವ ಮೊದಲೇ ಮುರಿದು ಹೋಗಿದೆ! ಕೊನೆಗೆ ತಾನೇ ಧನುಸ್ಸು ಮುರಿದಂತೆ ವರ ಪೋಸ್ ಕೊಟ್ಟಿದ್ದಾನೆ. ಬಳಿಕ ಪಕ್ಕದಲ್ಲಿಯೇ ಇದ್ದ ಆಧುನಿಕ ಸೀತೆ ಜತೆ ಮದುವೆಯಾಗಿದ್ದಾನೆ. ಬಳಿಕ ತಂತ್ರಜ್ಞಾನ ಬಳಸಿ ಕೆಲವೊಂದು ಟೆಕ್ನಿಕ್ಗಳನ್ನು ಮಾಡಲಾಗಿದೆ.
ಒಟ್ಟಿನಲ್ಲಿ, ಈ ಮದುವೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
https://www.instagram.com/reel/DIQYDbypI8C/?igsh=d3VvNm1xbGNiaHN6
https://www.newsics.com/2025/04/12/china-built-the-worlds-tallest-bridge/