newsics.com
ಚೀನಾದ ಹುವಾಜಿಯಾಂಗ್ ಗ್ರ್ಯಾಂಡ್ ಕಣಿವೆಯಲ್ಲಿ ವಿಶ್ವದ ಅತಿ ಎತ್ತರದ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಬೃಹತ್ ಸೇತುವೆಯ ನಿರ್ಮಾಣದ ರೋಮಾಂಚಕ ಡ್ರೋನ್ ದೃಶ್ಯಗಳು ಇದೀಗ ಬಹಿರಂಗಗೊಂಡಿದೆ.ಈ ಸೇತುವೆ ಉದ್ಘಾಟನೆಯೊಂದಿಗೆ ವಿಶ್ವದ ಅತಿ ಎತ್ತರದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.ಸದ್ಯಕ್ಕೆ ಈ ದಾಖಲೆ ಚೀನಾದ ಬೈಪಾಂಜಿಯಾಂಗ್ ಸೇತುವೆಯ ಹೆಸರಿನಲ್ಲಿದೆ
ನಿರ್ಮಾಣ ಹಂತದಲ್ಲಿರುವ ಈ ಸೇತುವೆಯ ಮೇಲೆ ಮೋಡಗಳು ಹಾದುಹೋಗುವ ದೃಶ್ಯಗಳು ವಿಸ್ಮಯ ಮೂಡಿಸುತ್ತವೆ. ಬೈಪಾನ್ ನದಿಯ ಮೇಲೆ ನಿರ್ಮಿಸಲಾಗಿರುವ ಈ ಸೇತುವೆಯು ಸುಮಾರು 2.9 ಕಿಲೋಮೀಟರ್ ಉದ್ದವಿದ್ದು, ನದಿಯಿಂದ 2050 ಅಡಿ ಎತ್ತರದಲ್ಲಿದೆ. ಇದರ ಮಧ್ಯ ಭಾಗವು 93 ವಿಭಾಗಗಳನ್ನು ಹೊಂದಿದ್ದು, ಒಟ್ಟು 22,000 ಟನ್‌ಗಳಷ್ಟು ತೂಕವನ್ನು ಹೊಂದಿದೆ.
ಸುಮಾರು 292 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸೇತುವೆಯ ಕಾಮಗಾರಿ 2022 ರಲ್ಲಿ ಪ್ರಾರಂಭವಾಗಿ ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ಹಂತ ತಲುಪಿದೆ. ಈ ವರ್ಷವೇ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
https://www.newsics.com/2025/04/12/five-students-collapse-after-being-struck-by-lightning-on-campus/