newsics.com
ನವದೆಹಲಿ: ವಾಟ್ಸಪ್‌ನಲ್ಲಿ ಡೌನ್‌ಲೋಡ್ ಆದ ಚಿತ್ರದಿಂದಲೇ ನಿಮ್ಮ ಫೋನ್ ಹ್ಯಾಕ್ ಆಗುವ ಸಾಧ್ಯತೆಯಿದೆ.ಹ್ಯಾಕರ್‌ಗಳು ಒಂದು ಫೋಟೋವನ್ನು ಸೃಷ್ಟಿಸಿ ಅದರಲ್ಲಿ ಮಾಲ್ವೇರ್ (ಕುತಂತ್ರಾಂಶ) ತುರುಕಿಸಿ ಕಳುಹಿಸುತ್ತಾರೆ.ಈ ಫೋಟೋವನ್ನು ವಾಟ್ಸಪ್‌ನಲ್ಲಿ ಯಾರೆಲ್ಲ ಡೌನ್‌ಲೋಡ್ ಮಾಡುತ್ತಾರೋ ಅವರ ಫೋನ್ ಹ್ಯಾಕ್ ಆಗುತ್ತದೆ.ಇನ್ನು ಮುಂದೇ ವಾಟ್ಸಪ್‌ನಲ್ಲಿ ಬರುವ ಪೋಟೋವನ್ನು ಡೌನ್‌ಲೋಡ್ ಮುನ್ನ ಎಚ್ಚರಿಕೆ ಇರಲಿ.
ಈ ಮಾಲ್ವೇರ್ ಪಾಸ್‌ವರ್ಡ್, ಒಟಿಪಿ ಮತ್ತು UPI ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ.ಮಾಲ್ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್ ಎಂಬುದರ ಸಂಕ್ಷಿಪ್ತ ರೂಪ.ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನ್ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ.ಅಪರಿಚಿತ ಅಥವಾ ಪರಿಶೀಲಿಸದ ಸಂಖ್ಯೆಗಳಿಂದ ಬರುವ ಚಿತ್ರಗಳು, ವಿಡಿಯೋಗಳನ್ನು ಡೌನ್‌ಲೋಡ್ ಮಾಡಬೇಡಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಲೇಬೇಡಿ. ವಾಟ್ಸಪ್ ಸೆಟ್ಟಿಂಗ್ಸ್‌ನಲ್ಲಿ ಮೀಡಿಯಾಗೆ ಹೋಗಿ ಆಟೋ-ಡೌನ್‌ಲೋಡ್ ಅನ್ನು ಆಫ್ ಮಾಡಿ.