newsics.com
ಉತ್ತರ ಪ್ರದೇಶ: ಮನುಷ್ಯನ ಬದುಕಿನಲ್ಲಿ ಅರಿವಿನ ಮೊದಲ ಕಿಡಿಯನ್ನು ಹಚ್ಚಿ ಮುನ್ನಡೆಸುವ ಮಹಾನುಭಾವರೇ ಶಿಕ್ಷಕರು. ಹೀಗಿರುವಾಗ ಇಲ್ಲೊಬ್ಬ ಶಿಕ್ಷಕರು ಮಾಡಿಕೆ ಕೆಲಸ ನೋಡಿದರೇ ಎಂಥವರಿಗೂ ಕೋಪ ಬರದಿರಲು ಸಾಧ್ಯವಿಲ್ಲ. ಇಂತಹ ಶಿಕ್ಷಕರಿಂದಲೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ ಎನ್ನುವ ಪ್ರಶ್ನೆ ಮೂಡದಿರದು.
ಉತ್ತರ ಪ್ರದೇಶ ದ ಮೀರತ್ ನ ಕೃಷ್ಣಪುರಿ ಜೂನಿಯರ್ ಹೈಸ್ಕೂಲ್ ನ ಶಿಕ್ಷಕಿಯೊಬ್ಬರು ತರಗತಿಯಲ್ಲೇ ನಿದ್ದೆ ಮಾಡಿದ್ದಾರೆ. ಈ ವಿಡಿಯೋ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Theindianbuzz ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿವೆ. ಮಹಿಳಾ ಶಿಕ್ಷಕಿ ಮಕ್ಕಳ ಬಗ್ಗೆ ಯೋಚನೆಯೇ ಇಲ್ಲದೇ ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ನಿದ್ರಿಸಿದ್ದಾರೆ. ಈ ಶಿಕ್ಷಕಿಯೂ ಗಾಢವಾದ ನಿದ್ರೆಯಲ್ಲಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ವಿದ್ಯಾರ್ಥಿಯೊಬ್ಬರು ಈ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೂಲ ಶಿಕ್ಷಣ ಅಧಿಕಾರಿ (ಬಿಎಸ್ಎ) ಆಶಾ ಚೌಧರಿ ಪ್ರತಿಕ್ರಿಯೆ ನೀಡಿದ್ದು, ಈ ವಿಷಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.